'ಚಕ್ ದೇ ಇಂಡಿಯಾ' ಸಿನಿಮಾದಲ್ಲಿ ಶಾರುಖ್ ಖಾನ್ ಕಬೀರ್ ಖಾನ್ ಪಾತ್ರದಲ್ಲಿ ಭಾರತ ಮಹಿಳಾ ಹಾಕಿ ತಂಡದ ಕೋಚ್ ಆಗಿ ಕಾಣಿಸಿಕೊಂಡಿದ್ದರು.

ಕೋಲ್ಕತಾ(ಏ.10): ಬಾಲಿವುಡ್ ಸೂಪರ್‌'ಸ್ಟಾರ್ ಶಾರುಖ್ ಖಾನ್ ತಮ್ಮ ಪುತ್ರ ಅಬ್ರಾಮ್‌ನನ್ನು ಭಾರತ ಹಾಕಿ ತಂಡದಲ್ಲಿ ನೋಡುವ ಆಸೆಯಿದೆ ಎಂದು ಹೇಳಿದ್ದಾರೆ.

2007ರಲ್ಲಿ ‘ಚಕ್ ದೇ ಇಂಡಿಯಾ’ ಸಿನಿಮಾದ ಮೂಲಕ ಹಾಕಿ ಬಗ್ಗೆ ತಮಗಿರುವ ಒಲವನ್ನು ಪ್ರದರ್ಶಿಸಿದ್ದ ಶಾರುಖ್, ‘ನನ್ನ ಮಗನಿಗೀಗ 5 ವರ್ಷ. ಅವನಿನ್ನೂ ಇನ್ನೂ ಕ್ರಿಕೆಟ್ ಆಡಲು ಆರಂಭಿಸಿಲ್ಲ. ಫುಟ್ಬಾಲ್ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದಾನೆ. ಆದರೆ ಅವನು ಹಾಕಿ ಆಟಗಾರನಾಗಿ ಭಾರತವನ್ನು ಪ್ರತಿನಿಧಿಸಬೇಕು ಎನ್ನುವುದು ನನ್ನ ಬಯಕೆಯಾಗಿದೆ’ ಎಂದು ಶಾರುಖ್ ಹೇಳಿದ್ದಾರೆ.

'ಚಕ್ ದೇ ಇಂಡಿಯಾ' ಸಿನಿಮಾದಲ್ಲಿ ಶಾರುಖ್ ಖಾನ್ ಕಬೀರ್ ಖಾನ್ ಪಾತ್ರದಲ್ಲಿ ಭಾರತ ಮಹಿಳಾ ಹಾಕಿ ತಂಡದ ಕೋಚ್ ಆಗಿ ಕಾಣಿಸಿಕೊಂಡಿದ್ದರು.