ಲಾಹೋರ್(ಸೆ.22): ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಬೌಲರ್ ಗಳ ಕೊಡುಗೆ ನೀಡಿರುವ ಪಾಕಿಸ್ತಾನದಲ್ಲಿ ಮತ್ತೊಬ್ಬ ಹೊಸ ಬೌಲರ್ ಹುಟ್ಟಿಕೊಂಡಿದ್ದಾನೆ.
21 ವರ್ಷದ ಯಾಸಿರ್ ಜಾನ್ ಎನ್ನುವ ಯುವ ಕ್ರಿಕೆಟಿಗೆ ಎಡಗೈ ಮತ್ತು ಬಲಗೈ ಎರಡರಲ್ಲೂ ಬೌಲಿಂಗ್ ಮಾಡುವ ಕೌಶಲ್ಯ ಹೊಂದಿದ್ದು, ಎರಡು ಮಾದರಿಯ ಬೌಲಿಂಗ್ ನಲ್ಲಿ ಉತ್ತಮ ಪೇಸ್ ಎಸೆಯುವ ಮೂಲಕ ಗಮನ ಸೆಳೆದಿದ್ದಾನೆ.
ಪಾಕಿಸ್ತಾನ್ ಸುಪರ್ ಲೀಗ್ ನಲ್ಲಿ ಲಾಹೋರ್ ತಂಡದಲ್ಲಿ ಕಾಣಿಸಿಕೊಂಡಿರುವ ಯಾಸಿರ್ ಜಾನ್, ಬಲಗೈನಲ್ಲಿ ಸರಸರಿ 145 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಲಿದ್ದು, ಅದೇ ರೀತಿ ಎಡಗೈನಲ್ಲಿ ಸರಸರಿ 135 ಕಿಮೀ ವೇಗದಲ್ಲಿ ಬೌಲಿಂಗ್ ಮಾಡಲಿದ್ದಾರೆ ಎನ್ನಲಾಗಿದೆ.
ಸದ್ಯ ಇಸ್ಲಾಮಾಬಾದ್ ನಲ್ಲಿರುವ ಯಾಸಿರ್ ಜಾನ್ ಕುಟುಂಬ ತರಕಾರಿ ವ್ಯಾಪಾರವನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದು, ಕ್ರಿಕೆಟ್ ಅನ್ನು ಪಾರ್ಟ್ ಟೈಮ್ ಆಗಿ ಸ್ವೀಕರಿಸಿದ್ದು, ಸದ್ಯ ಲಾಹೋರ್ ತಂಡದೊಂದಿಗೆ 10ವರ್ಷಗಳ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.
ಮುಂದಿನ ದಿನಗಳಲ್ಲಿ ಪಾಕಿಸ್ತಾನದ ರಾಷ್ಟ್ರೀಯಾ ತಂಡದಲ್ಲಿಯೂ ಸ್ಥಾನ ಪಡೆದುಕೊಳ್ಳುವ ಮಹಾದಾಸೆ ಹೊದಿರುವ ಯಾಸಿರ್, ಅಂತರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಟ್ಯಾಲೆಂಟ್ ತೋರಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ.
