ಗರ್ಭಿಣಿಯಾಗಿದ್ದರೂ ಸೆರೆನಾ 2017ರ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಅನ್ನು ತಮ್ಮದಾಗಿಸಿಕೊಂಡಿದ್ದರು. ಆ ಬಳಿಕ ಟೆನಿಸ್ ಅಂಗಳದಿಂದ ದೂರ ಉಳಿದಿದ್ದರು.

ಅಬುಧಾಬಿ(ಡಿ.26): ಗರ್ಭಿಣಿಯಾದ ಕಾರಣ 11 ತಿಂಗಳಿಂದ ಟೆನಿಸ್ ಅಂಗಳದಿಂದ ದೂರ ಉಳಿದಿದ್ದ, 23 ಗ್ರ್ಯಾನ್'ಸ್ಲಾಂ ಒಡತಿ ಅಮೆರಿಕದ ತಾರಾ ಟೆನಿಸ್ ಆಟಗಾರ್ತಿ ಸೆರೆನಾ ವಿಲಿಯಮ್ಸ್ ವೃತ್ತಿಪರ ಜೀವನಕ್ಕೆ ಮರಳಲು ಸಜ್ಜಾಗಿದ್ದಾರೆ. ಇದೇ ಸೆಪ್ಟೆಂಬರ್‌'ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಸೆರೆನಾ, ಮಗು ಜನಿಸಿದ ನಾಲ್ಕೇ ತಿಂಗಳೊಳಗೆ ಟೆನಿಸ್‌'ಗೆ ಮರಳಲು ಸಿದ್ಧತೆ ನಡೆಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದೇ ತಿಂಗಳಾಂತ್ಯದಿಂದ ಆರಂಭಗೊಳ್ಳಲಿರುವ ಮುಬದಲಾ ವಿಶ್ವ ಟೆನಿಸ್ ಚಾಂಪಿಯನ್‌'ಶಿಪ್‌'ನಲ್ಲಿ ಸೆರೆನಾ ಪಾಲ್ಗೊಳ್ಳುತ್ತಿದ್ದು, ಶನಿವಾರ (ಡಿ.30) ತಮ್ಮ ಮೊದಲ ಪಂದ್ಯ ಆಡಲಿದ್ದಾರೆ. 36 ವರ್ಷದ ಸೆರೆನಾ, ಮೊದಲ ಸುತ್ತಿನಲ್ಲಿ ಲಾಟ್ವಿಯಾದ ಜೆಲೆನಾ ಓಸ್ತಪೆಂಕೊ ವಿರುದ್ಧ ಸೆಣೆಸಾಟ ನಡೆಸಲಿದ್ದಾರೆ.

ಗರ್ಭಿಣಿಯಾಗಿದ್ದರೂ ಸೆರೆನಾ 2017ರ ಜನವರಿಯಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಅನ್ನು ತಮ್ಮದಾಗಿಸಿಕೊಂಡಿದ್ದರು. ಆ ಬಳಿಕ ಟೆನಿಸ್ ಅಂಗಳದಿಂದ ದೂರ ಉಳಿದಿದ್ದರು.