ಟ್ವೀಟರ್‌ನ ಮೂಲಕ ತಾವು ಟೂರ್ನಿಯಿಂದ ಹಿಂದೆ ಸರಿದಿರುವುದನ್ನು ಖಾತ್ರಿಪಡಿಸಿರುವ ಸೆರೆನಾ, ‘ವೈದ್ಯರ ಸಲಹೆಯ ಮೇರೆಗೆ ತಾವು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಪ್ರತಿಯೊಂದು ದಿನವನ್ನೂ ಬೇಗನೇ ಚೇತರಿಸಿಕೊಳ್ಳಬೇಕೆಂಬ ಬಯಕೆಯೊಂದಿಗೆ ಕಳೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಲಾಸ್ ಏಂಜಲೀಸ್ (ಅ.17): ಅಮೆರಿಕದ ಟೆನಿಸ್ ಸೂಪರ್ ಸ್ಟಾರ್ ಸೆರೆನಾ ವಿಲಿಯಮ್ಸ್, ಇದೇ ತಿಂಗಳ 23ರಿಂದ ಸಿಂಗಾಪುರದಲ್ಲಿ ಆರಂಭಗೊಳ್ಳಲಿರುವ ಡಬ್ಲೂಟಿಎ ಫೈನಲ್ಸ್ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ.

ಭುಜದ ನೋವಿನಿಂದ ಬಳಲುತ್ತಿರುವುದರಿಂದಾಗಿ ಅವರು ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿಲ್ಲವೆಂದು ಡಬ್ಲ್ಯೂಟಿಎ ತಿಳಿಸಿದೆ.

ಏತನ್ಮಧ್ಯೆ, ಟ್ವೀಟರ್‌ನ ಮೂಲಕ ತಾವು ಟೂರ್ನಿಯಿಂದ ಹಿಂದೆ ಸರಿದಿರುವುದನ್ನು ಖಾತ್ರಿಪಡಿಸಿರುವ ಸೆರೆನಾ, ‘ವೈದ್ಯರ ಸಲಹೆಯ ಮೇರೆಗೆ ತಾವು ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದು, ಪ್ರತಿಯೊಂದು ದಿನವನ್ನೂ ಬೇಗನೇ ಚೇತರಿಸಿಕೊಳ್ಳಬೇಕೆಂಬ ಬಯಕೆಯೊಂದಿಗೆ ಕಳೆಯುತ್ತಿದ್ದೇನೆ’ ಎಂದು ಹೇಳಿದ್ದಾರೆ.

ಪ್ರಸಕ್ತ ವರ್ಷದಲ್ಲಿ ಕೇವಲ ಒಂದು ಗ್ರ್ಯಾನ್'ಸ್ಲಾಮ್(ವಿಂಬಲ್ಡನ್) ಗೆದ್ದಿರುವ ಸೆರೆನಾ ಸ್ಟೆಫಿಗ್ರಾಪ್ ದಾಖಲೆಯನ್ನು ಸರಿಗಟ್ಟಿದ್ದಾರೆ. ಆದರೆ ಉಳಿದೆರಡು ಗ್ರ್ಯಾನ್'ಸ್ಲಾಮ್'ನಲ್ಲಿ ಫೈನಲ್ ತಲುಪಿದರೂ ಪ್ರಶಸ್ತಿ ಎತ್ತಿಹಿಡಿಯುವಲ್ಲಿ ಅಮೆರಿಕಾದ ಆಟಗಾರ್ತಿ ವಿಫಲರಾಗಿದ್ದಾರೆ.