ಸೆರೆನಾ ಅವರಿಗೆ 35 ವರ್ಷವಾಗಿದ್ದರೆ, ಅವರು ವಿವಾಹವಾಗುತ್ತಿರುವ ಹುಡುಗನ ವಯಸ್ಸು 33.
ವಾಷಿಂಗ್ಟನ್(ಡಿ.30): ಇಪ್ಪತ್ತೆರಡು ಗ್ರ್ಯಾಂಡ್ ಸ್ಲಾಮ್ ಒಡತಿ ಹಾಗೂ ಮಾಜಿ ನಂಬರ್'ಒನ್ ಟೆನಿಸ್ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್, ಅಂತರ್ಜಾಲ ಸೇವಾ ಸಂಸ್ಥೆಯಾದ ‘ರಿಡಿಟ್’ನ ಅಲೆಕ್ಸಿಸ್ ಒಹಾನಿಯನ್ ಅವರ ಜತೆ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ತಿಳಿಸಿದ್ದಾರೆ.
ಟ್ವಿಟರ್‌ನಲ್ಲಿ ಇದನ್ನು ಕಾವ್ಯಾತ್ಮಕವಾಗಿ ವರ್ಣಿಸಿರುವ ವಿಲಿಯಮ್ಸ್‌ಗೆ ಪ್ರತಿಸಂದೇಶ ಕಳುಹಿಸಿರುವ ಅಲೆಕ್ಸಿಸ್, 'ನೀವು (ಸೆರೆನಾ) ನನ್ನನ್ನು ಜಗತ್ತಿನ ಅತ್ಯಂತ ಸಂತೋಷಪಡುವ ವ್ಯಕ್ತಿಯನ್ನಾಗಿಸಿದ್ದೀರಿ' ಎಂದು ತಿಳಿಸಿದ್ದಾರೆ.
ಆದರೆ, ಮದುವೆ ಮತ್ತಿತರ ಮಾಹಿತಿಯನ್ನು ಸೆರೆನಾ ಹಂಚಿಕೊಂಡಿಲ್ಲ. ಅಂದಹಾಗೆ, ಸೆರೆನಾ ಅವರಿಗೆ 35 ವರ್ಷವಾಗಿದ್ದರೆ, ಅವರು ವಿವಾಹವಾಗುತ್ತಿರುವ ಹುಡುಗನ ವಯಸ್ಸು 33.
