ಸದ್ಯಕ್ಕೆ ಟೀಂ ಇಂಡಿಯಾದಲ್ಲಿರುವ ಅಗ್ರ ಕ್ರಮಾಂಕವನ್ನು ಯಾವುದೇ ಕಾರಣಕ್ಕೂ ಬದಲಿಸದಿರಲು ನಿರ್ಧರಿಸಲಾಗಿದ್ದು, ಮುಂದಿನ ವಿಶ್ವಕಪ್‌ನಲ್ಲಿ ಇದೇ ಕ್ರಮಾಂಕದಲ್ಲೇ ಟೀಂ ಇಂಡಿಯಾ ಮುಂದುವರಿಯಬೇಕೆಂಬ ಇಚ್ಛೆಯನ್ನು ಆಯ್ಕೆ ಮಂಡಳಿ ಹೊಂದಿದೆ.

ನವದೆಹಲಿ(ನ.09): 2019ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಾವಳಿಯವರೆಗೆ ಮಹೇಂದ್ರ ಸಿಂಗ್ ಧೋನಿಯವರನ್ನೇ ಭಾರತ ತಂಡದ ನಾಯಕರನ್ನಾಗಿ ಮುಂದುವರಿಸಲು ಬಿಸಿಸಿಐ ಆಯ್ಕೆ ಮಂಡಳಿ ಚಿಂತನೆ ನಡೆಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಹೇಳಿದೆ.

ಸದ್ಯಕ್ಕೆ ಟೀಂ ಇಂಡಿಯಾದಲ್ಲಿರುವ ಅಗ್ರ ಕ್ರಮಾಂಕವನ್ನು ಯಾವುದೇ ಕಾರಣಕ್ಕೂ ಬದಲಿಸದಿರಲು ನಿರ್ಧರಿಸಲಾಗಿದ್ದು, ಮುಂದಿನ ವಿಶ್ವಕಪ್‌ನಲ್ಲಿ ಇದೇ ಕ್ರಮಾಂಕದಲ್ಲೇ ಟೀಂ ಇಂಡಿಯಾ ಮುಂದುವರಿಯಬೇಕೆಂಬ ಇಚ್ಛೆಯನ್ನು ಆಯ್ಕೆ ಮಂಡಳಿ ಹೊಂದಿದೆ.

2019ರೊಳಗೆ ಧೋನಿ ನಿವೃತ್ತಿ ಘೋಷಿಸದಿರಲಿ ಎಂಬ ಆಶಾಭಾವನೆಯನ್ನು ಖುದ್ದು ಆಯ್ಕೆ ಮಂಡಳಿ ಸದಸ್ಯರೇ ಹೇಳಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ.