ಮೋಡದ ಛಾಯೆಯಂತೆ ಕೊಹ್ಲಿ ಯಾವಾಗಲೂ ಯಾವ ಸಂದರ್ಭದಲ್ಲೂ ಆವರಿಸಿಕೊಂಡುಬಿಡುತ್ತಾರೆ. ಹೀಗಾಗಿ ಅವರ ಹೆಸರನ್ನು ಬಾದಲ್ ಎಂದು ಬದಲಿಸಬೇಕೆಂದು ಸೆಹ್ವಾಗ್ ತಮಾಷೆ ಮಾಡುತ್ತಾರೆ.

ನವದೆಹಲಿ: ವೀರೇಂದ್ರ ಸೆಹ್ವಾಗ್ ಕ್ರೀಸ್'ನಲ್ಲಿದ್ದರೆ ಎದುರಾಳಿಗಳಿಗೆ ಸಂಕಟ, ಪ್ರೇಕ್ಷಕರಿಗೆ ಮಸ್ತ್ ಎಂಟರ್'ಟೈನ್ಮೆಂಟ್. ಈಗ ನಿವೃತ್ತರಾದ ಬಳಿಕ ಸೆಹ್ವಾಗ್ ಬೇರೆ ರೀತಿಯ ಫಾರ್ಮ್ ಕಂಡುಕೊಂಡಿದ್ದಾರೆ. ತಮ್ಮ ಹಾಸ್ಯಮಿಶ್ರಿತ ಮೊನಚಿನ ಹೇಳಿಕೆಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸೂಪರ್'ಹಿಟ್ ಆಗಿದ್ದಾರೆ. ಟ್ವಿಟ್ಟರ್'ನಲ್ಲಿ ಪಾಕಿಸ್ತಾನದ ಆಟಗಾರರನ್ನು ನೇರವಾಗಿ ಕಿಚಾಯಿಸುವುದು ಇವರ ಫೇವರಿಟ್ ಕೆಲಸ. ಇಂಗ್ಲೆಂಡ್ ಆಟಗಾರರ ಕಾಲೆಳೆಯುವುದೂ ಇವರ ನೆಚ್ಚಿನ ಕಾಯಕ. ಭಾರತೀಯ ಕ್ರಿಕೆಟ್'ನ ಮೇಲೂ ಇವರು ಆಗಾಗ ಕಾಮೆಂಟರಿ ಕೊಡುತ್ತಿರುತ್ತಾರೆ. ಈಗ ಸಿಎನ್'ಎನ್ ನ್ಯೂಸ್18 ವಾಹಿನಿಯ ಪ್ರತೀಕ್ ಸಾಗರ್ ಜೊತೆಗಿನ ಚುಟುಕು ಸಂದರ್ಶನದಲ್ಲಿ ಸೆಹ್ವಾಗ್ ತಮ್ಮ ಫ್ಯಾನ್ ಫಾಲೋಯಿಂಗ್'ಗೋಸ್ಕರ ಒಂದಷ್ಟು ತಮಾಷೆಗಳನ್ನ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊಹ್ಲಿ ಹೆಸರಿನ ಮೇಲೆ ಕಣ್ಣು:
ಇದೀಗ ಟೀಮ್ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿಯವರ ಹೆಸರು ಬದಲಿಸಲು ಸಲಹೆ ನೀಡಿದ್ದಾರೆ ವೀರೂ. ಕೊಹ್ಲಿಯ ಹೆಸರು "ಬಾದಲ್" (ಮೋಡ) ಎಂದು ಬದಲಾಗಬೇಕೆಂದು ಸೆಹ್ವಾಗ್ ಹೇಳುತ್ತಾರೆ. ಮೋಡದ ಛಾಯೆಯಂತೆ ಕೊಹ್ಲಿ ಯಾವಾಗಲೂ ಯಾವ ಸಂದರ್ಭದಲ್ಲೂ ಆವರಿಸಿಕೊಂಡುಬಿಡುತ್ತಾರೆ. ಹೀಗಾಗಿ ಅವರ ಹೆಸರನ್ನು ಬಾದಲ್ ಎಂದು ಬದಲಿಸಬೇಕೆಂದು ಸೆಹ್ವಾಗ್ ತಮಾಷೆ ಮಾಡುತ್ತಾರೆ.

ತಮ್ಮ ಸಿನಿಮಾಗೆ ತಾವೇ ಹೀರೋ?
ಧೋನಿಯ ಜೀವನ ಚರಿತ್ರೆಯ ಸಿನಿಮಾ ಬಂದಿರುವಂತೆ ವೀರೇಂದ್ರ ಸೆಹ್ವಾಗ್ ಕುರಿತ ಸಿನಿಮಾ ಬರಬಹುದಾ? ಸೆಹ್ವಾಗ್ ಈ ಬಗ್ಗೆ ಹಿಂಟ್(ಸುಳಿವು) ಕೊಡುತ್ತಾರೆ. ತಮ್ಮ ಜೀವನ ಚರಿತ್ರೆಯ ಸಿನಿಮಾ ಬಂದರೆ ತಾನೇ ಹೀರೋ ಆಗುತ್ತೇನೆ. ಅದಕ್ಕಾಗಿ ನಟನೆಯ ಕಲೆಯನ್ನು ಕಲಿಯುತ್ತಿದ್ದೇನೆ ಎಂದು ವೀರೂ ತಿಳಿಸುತ್ತಾರೆ.