ಕಾನ್ಪುರ(ಸೆ.27): ಭಾರತದ ಪರ ಟೆಸ್ಟ್​​ ಕ್ರಿಕೆಟ್​ನಲ್ಲಿ ವೇಗವಾಗಿ 200 ವಿಕೆಟ್ ಪಡೆದು ಸಾಧನೆ ಮಾಡಿರುವ ರವಿಚಂದ್ರನ್ ಅಶ್ವಿನ್​ಗೆ ಮಾಜಿ ವಿರೇಂದ್ರ ಸೆಹ್ವಾಗ್ ಹೊಸದೊಂದು ಹೆಸರನ್ನು ಇಟ್ಟಿದ್ದಾರೆ. 

ರೆಕಾರ್ಡ್ ಮೇಲೆ ರೆಕಾರ್ಡ್ ಮಾಡುತ್ತಿರುವ ಅಶ್ವಿನ್​ಗೆ ‘ರೆಕಾರ್ಡ್​ಚಂದ್ರನ್ ಅಶ್ವಿನ್’ ಎಂದು ಹೆಸರಿಟ್ಟಿದ್ದಾರೆ. ಟ್ವಿಟರ್​ನಲ್ಲಿ ಅಶ್ವಿನ್​ಗೆ ವಿಶೇಷವಾಗಿ ಶುಭಕೋರಿರುವ ವೀರೂ, ಹೊಸ ಹೆಸರಿಟ್ಟಿದ್ದಾರೆ.

ಇದರೊಂದಿಗೆ ಆರ್. ಅಶ್ವಿನ್ ಸದ್ಯದ ಕ್ರಿಕೆಟ್ ಲೋಕದ ಅತ್ಯುತ್ತಮ ಸ್ಪಿನ್ ಬೌಲರ್ ಎಂದು ಸ್ಪಿನ್ ದಂತಕತೆ ಕರ್ನಾಟಕದ ಸ್ಪಿನ್ನರ್ ಇಎಎಸ್ ಪ್ರಸನ್ನ ಹೇಳಿದ್ದಾರೆ. 

ನ್ಯೂಜಿಲೆಂಡ್ ವಿರುದ್ಧ 10 ವಿಕೆಟ್ ಪಡೆದ ಅಶ್ವಿನ್, ವೇಗವಾಗಿ 200 ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಈ ಸಾಧನೆ ಮೆಚ್ಚಿ ಅಶ್ವಿನ್​ರನ್ನ ಪ್ರಸನ್ನ ಹೊಗಳಿದ್ದಾರೆ.