ಮೂರುವರೆ ವರ್ಷಗಳ ಕಮ್​​ಬ್ಯಾಕ್​​ ಮಾಡಿ ಭರ್ಜರಿ ಆಟ ಪ್ರದರ್ಶಿಸಿದ ಯುವರಾಜ್ ಹಾದಿ ನೀವು ಅಂದುಕೊಂಡಷ್ಟು ಸುಲಭದ್ದಾಗಿರಲಿಲ್ಲ. ಧೀರ್ಘ ಕಾಲದ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ನಂತರ ಯುವಿ ತಂಡವನ್ನ ಸೇರಿಕೊಳ್ಳುವುದಕ್ಕೂ ಮೊದಲು ಸಾಕಷ್ಟು ತಯಾರಿ ನಡೆಸಿದರು. 150 ರನ್​ ಹೊಡೆಯಲುಕೆ ಪಂಜಾಬ್ ಪುತ್ತರ್​ ಹೇಗೆ ರೆಡಿಯಾಗಿದ್ದು ಹೇಗೆ? ಇಲ್ಲಿದೆ ವಿವರ.

ಕಟಕ್(ಜ.20): ಮೂರುವರೆ ವರ್ಷಗಳ ಕಮ್​​ಬ್ಯಾಕ್​​ ಮಾಡಿ ಭರ್ಜರಿ ಆಟ ಪ್ರದರ್ಶಿಸಿದ ಯುವರಾಜ್ ಹಾದಿ ನೀವು ಅಂದುಕೊಂಡಷ್ಟು ಸುಲಭದ್ದಾಗಿರಲಿಲ್ಲ. ಧೀರ್ಘ ಕಾಲದ ನಂತರ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದ ನಂತರ ಯುವಿ ತಂಡವನ್ನ ಸೇರಿಕೊಳ್ಳುವುದಕ್ಕೂ ಮೊದಲು ಸಾಕಷ್ಟು ತಯಾರಿ ನಡೆಸಿದರು. 150 ರನ್​ ಹೊಡೆಯಲು ಪಂಜಾಬ್ ಪುತ್ತರ್​ ಹೇಗೆ ರೆಡಿಯಾಗಿದ್ದು ಹೇಗೆ? ಇಲ್ಲಿದೆ ವಿವರ.

ಹನಿಮೂನ್​​​ ಮಜಾದ ಮಧ್ಯೆ ಯುವಿಗೆ ಸಿಹಿ ಸುದ್ದಿ

ಯುವರಾಜ್ ಸಿಂಗ್ ಇನ್ನೇನು ಮತ್ತೆ ಟೀಂ ಇಂಡಿಯಾಗೆ ಕಮ್'​​ಬ್ಯಾಕ್​​ ಮಾಡುವುದಿಲ್ಲ, ಆರಾಮಾಗಿ ಮದುವೆ ಮಾಡಿಕೊಂಡು ಸೆಟಲ್​​ ಅಗೋಣ ಅಂತ ಹೇಜಲ್​​ ಕೀಚ್​'​ರನ್ನು ಮದುವೆಯಾಗಿ ಹನಿಮೂನ್​'​​ಗೆ ಪ್ರಯಾಣ ಮಾಡಿದರು. ಆದರೆ ಆಯ್ಕೆ ಸಮಿತಿ ಸದ್ದಿಲ್ಲದೆ ಇಂಗ್ಲೆಂಡ್​​​​ ವಿರುದ್ಧದ ಸರಣಿಗೆ ಆಯ್ಕೆ ಮಾಡಿ ಯುವಿ ಮದುವೆಯ ಗಿಫ್ಟ್​​​ ನೀಡುವುದರೊಂದಿಗೆ ಶಾಕ್​​ ಕೂಡ ನೀಡಿತ್ತು.

ತಂಡಕ್ಕೆ ಆಯ್ಕೆಯಾಗಿರುವ ಸುದ್ದಿ ಕಿವಿಗೆ ಬೀಳುತ್ತಿದಂತೆ ಯುವಿ ಶಾಕ್​​ ಆಗ್ಬಿಟಿದ್ದರು. ಅಷ್ಟೇ ಅಲ್ಲ ಹನಿಮೂನ್​​​ನಲ್ಲಿದ್ದ ಯುವಿ ಹೇಜಲ್​​ ಕೀಚ್'​​​​ರ ಕೈ ಹಿಡಿದು ನಾನು ಮರು ಆಯ್ಕೆಯಾಗಲು ನೀನೇ ಕಾರಣ ಎಂದು ಹೇಳಿ ತನ್ನ ಪತ್ನಿಗೆ ಟಾಟಾ ಹೇಳಿ ಕೂಡಲೇ ಭಾರತದ ಫ್ಲೈಟ್​​​ ಹತ್ತಿಬಿಟ್ಟರು.

ಹನಿಮೂನ್​'ನಿಂದ ನೇರ ಯುವಿ ಬಂದಿದ್ದೆಲ್ಲಿಗೆ

ಹನಿಮೂನ್​​​ ಅನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ಬಂದ ಯುವಿ ಸುಮ್ಮನೆ ಕೂರಲಿಲ್ಲ. ಸರಣಿಗೆ ಸಿದ್ದತೆ ನಡೆಸಿದರು. ಕಠಿಣ ಅಭ್ಯಾಸದಲ್ಲಿ ನಿರತರಾಗಿದ್ದ ಯುವರಾಜ್​​ ತನ್ನ ಕಮ್​​​ಬ್ಯಾಕ್​'ಗೆ ಇನ್ನಿಲ್ಲದ ಕಸರತ್ತು ನಡೆಸಿದ್ರು. 35 ವರ್ಷದ ಯುವಿ ತನ್ನ ಫಿಟ್ನೆಸ್​​​ ಕಾಪಾಡಿಕೊಳ್ಳಲು ಏನೆಲ್ಲಾ ಮಾಡ್ತಾರೆ ನೀವೇ ನೋಡಿ.

150 ರನ್ ಹೊಡೆಸಿದ್ದು ಅದೇ ಫಿಟ್ನೆಸ್: ಯುವಿಗೆ ಪರ್ಮನೆಂಟ್ ಟಿಕೆಟ್ ಕೊಡಿಸಿದ ಫಿಟ್ನೆಸ್

ಟೀಂ ಇಂಡಿಯಾದಲ್ಲಿ ದೀರ್ಘ ಕಾಲ ಉಳಿಯಬೇಕಾದರೆ ಫಿಟ್ನೆಸ್​​ ಬಲು ಮುಖ್ಯ ಎಂದು ಅರಿತಿದ್ದ ಯುವಿ ಅದಕ್ಕಾಗಿ ಸಾಕಷ್ಟು ಕಸರತ್ತು ನಡೆಸಿದರು. ಅದರ ಪರಿಣಾವೇ ನಿನ್ನೆಯ ಪಂದ್ಯದಲ್ಲಿ ಪಂಜಾಬ್​​ ಪುತ್ತರ್​​ ಅಬ್ಬರಿಸಲು ಸಾಧ್ಯವಾಗಿದ್ದು. ಏನೇ ಆದ್ರು ಯುವಿ ಟೀಂ ಇಂಡಿಯಾದಲ್ಲಿ ಇನ್ನಷ್ಟು ವರ್ಷಗಳು ದೊರೆಯಂತೆ ಮೆರೆಯಲಿ. ಅವರ ಅಭಿಮಾನಿಗಳನ್ನ ಹೆಚ್ಚು ಹೆಚ್ಚು ರಂಜಿಸಲಿ ಎಂಬುದೇ ನಮ್ಮ ಆಶಯ.

- ಅಮಿತ್​​​ ಗೌಡ, ಸುವರ್ಣ ನ್ಯೂಸ್