ಇನ್ನು ಚೇತೇಶ್ವರ್ ಪೂಜಾರ ನಾಯಕತ್ವದ ಸೌರಾಷ್ಟ್ರ ತಂಡದ ಪರ ಕಣಕ್ಕಿಳಿದಿದ್ದ ಉತ್ತಪ್ಪ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟುಕೊಳ್ಳಲಾಗಿತ್ತು. 5ನೇ ಕ್ರಮಾಂಕದಲ್ಲಿ ಕ್ರೀಸ್'ಗಿಳಿದ ಉತ್ತಪ್ಪ ಒಂದು ಬೌಂಡರಿ ಸಹಿತ 7 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ನವದೆಹಲಿ(ಅ.06): ಬಹುನಿರೀಕ್ಷಿತ 2017-18ನೇ ಸಾಲಿನ ರಣಜಿ ಟ್ರೋಫಿಗೆ ಚಾಲನೆ ದೊರೆತಿದ್ದು, ಹಿಮಾಚಲ ಪ್ರದೇಶದ ಯುವ ಬ್ಯಾಟ್ಸ್'ಮನ್ ಪ್ರಶಾಂತ್ ಛೋಪ್ರಾ ಭರ್ಜರಿ ದ್ವಿಶತಕ ಸಿಡಿಸಿ ಸಂಭ್ರಮಿಸಿದರೆ, ಕರ್ನಾಟಕ ತಂಡ ತೊರೆದು ಸೌರಾಷ್ಟ್ರ ಪರ ಕಣಕ್ಕಿಳಿದಿರುವ ರಾಬಿನ್ ಉತ್ತಪ್ಪ ಕೇವಲ 7 ರನ್ ಬಾರಿಸಿ ಔಟ್ ಆಗುವ ಮೂಲಕ ನಿರಾಸೆ ಮೂಡಿಸಿದ್ದಾರೆ.

ಪಂಜಾಬ್ ವಿರುದ್ಧ ಅಕ್ಷರಶಃ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಬೀಸಿದ ಪ್ರಶಾಮತ್ ಛೋಪ್ರಾ 289 ಎಸೆತಗಳಲ್ಲಿ 271 ರನ್ ಸಿಡಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಇನ್ನು ಚೇತೇಶ್ವರ್ ಪೂಜಾರ ನಾಯಕತ್ವದ ಸೌರಾಷ್ಟ್ರ ತಂಡದ ಪರ ಕಣಕ್ಕಿಳಿದಿದ್ದ ಉತ್ತಪ್ಪ ಮೇಲೆ ಸಾಕಷ್ಟು ನಿರೀಕ್ಷೆಯಿಟ್ಟುಕೊಳ್ಳಲಾಗಿತ್ತು. 5ನೇ ಕ್ರಮಾಂಕದಲ್ಲಿ ಕ್ರೀಸ್'ಗಿಳಿದ ಉತ್ತಪ್ಪ ಒಂದು ಬೌಂಡರಿ ಸಹಿತ 7 ರನ್ ಬಾರಿಸಿ ಪೆವಿಲಿಯನ್ ಸೇರಿದರು.

ವಿವಿಧ ಪಂದ್ಯಗಳ ಸ್ಕೋರ್ ವಿವರ (ಮೊದಲ ದಿನದಂತ್ಯಕ್ಕೆ)

ದೆಹಲಿ ವಿರುದ್ಧ ಅಸ್ಸಾಂ 224/7,

ಸರ್ವೀಸಸ್ ವಿರುದ್ಧ ಬಂಗಾಳ 341/3,

ಗೋವಾ ವಿರುದ್ಧ ಛತ್ತೀಸ್‌'ಗಢ 189/5,

ಪಂಜಾಬ್ ವಿರುದ್ಧ ಹಿಮಾಚಲ 459/2

ಬರೋಡಾ ವಿರುದ್ಧ ಮಧ್ಯಪ್ರದೇಶ 268/5

ಹರ್ಯಾಣ ವಿರುದ್ಧ ಸೌರಾಷ್ಟ್ರ 271/7

ಜಮ್ಮು-ಕಾಶ್ಮೀರ ವಿರುದ್ಧ ರಾಜಸ್ಥಾನ 249/4

ಕೇರಳ ವಿರುದ್ಧ ಜಾರ್ಖಂಡ್ 200/9,

ತಮಿಳುನಾಡು 176/10 ವಿರುದ್ಧ ಆಂಧ್ರ 8/0,

ರೈಲ್ವೇಸ್ 182/10 ವಿರುದ್ಧ ಉ.ಪ್ರದೇಶ 9/0