ಗಯಾನ(ಸೆ.15): ವೆಸ್ಟ್ ಇಂಡೀಸ್ ತಂಡದ ಪ್ರಭಾವಿ ಬ್ಯಾಟ್ಸ್‌ಮನ್ ಎನಿಸಿದ್ದ ರಾಮ್‌ನರೇಶ್ ಸರವಣ್ ಅಂತಾರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಕಳೆದ 2013ರಿಂದ ರಾಮ್‌ನರೇಶ್ ಒಂದು ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿಲ್ಲ. 36 ವರ್ಷ ವಯಸ್ಸಿನ ರಾಮ್‌ನರೇಶ್, ಒಂದು ಕಾಲದಲ್ಲಿ ವಿಂಡೀಸ್ ತಂಡದ ಪ್ರಮುಖ ಬ್ಯಾಟ್ಸ್‌ಮನ್ ಎನಿಸಿದ್ದರು. ಕ್ರಮವಾಗಿ 2011ರಲ್ಲಿ ಭಾರತ ವಿರುದ್ಧದ ಟೆಸ್ಟ್ ಮತ್ತು 2013ರಲ್ಲಿ ಭಾರತ ವಿರುದ್ಧದ ಏಕದಿನ ಪಂದ್ಯ ವಿಂಡೀಸ್ ಕ್ರಿಕೆಟಿಗನಿಗೆ ಕೊನೆಯ ಪಂದ್ಯವಾಗಿದೆ.

ತಂಡದಲ್ಲಿ ಸ್ಥಾನ ಸಿಗದ ಕಾರಣದಿಂದ ರಾಮ್‌ನರೇಶ್ ಔಪಚಾರಿಕವಾಗಿ ಗುರುವಾರ ಗಯಾನದಲ್ಲಿ ನಿವೃತ್ತಿ ಹೇಳಿದ್ದಾರೆ. 2000ದಲ್ಲಿ ಪಾಕಿಸ್ತಾನ ವಿರುದ್ಧದಲ್ಲಿ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದರು. ವಿಂಡೀಸ್‌ನ ಸ್ಟಾರ್ ಆಟಗಾರ ಬ್ರಿಯನ್ ಲಾರಾ ನಿವೃತ್ತಿಯ ನಂತರ ರಾಮ್‌ನರೇಶ್, 3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದರು. ಇದೇ ಕ್ರಮಾಂಕದಲ್ಲಿ ರಾಮ್‌ನರೇಶ್ 15 ಶತಕ ದಾಖಲಿಸಿದ್ದಾರೆ. 2009ರಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಾಮ್‌ನರೇಶ್ 291 ರನ್‌ಗಳಿಸಿ ವೈಯಕ್ತಿಕ ಗರಿಷ್ಠ ರನ್‌ಗಳಿಸಿದ್ದರು. ರಾಮ್‌ನರೇಶ್ 5 ಏಕದಿನ, 4 ಟೆಸ್ಟ್ ಮತ್ತು 2 ಟಿ20 ಪಂದ್ಯಗಳಲ್ಲಿ ನಾಯಕನ ಜವಾಬ್ದಾರಿ ಹೊತ್ತಿದ್ದರು.

ರಾಮ್‌ನರೇಶ್ ಕ್ರಿಕೆಟ್ ಅಂಕಿ-ಅಂಶ

ಟೆಸ್ಟ್‌ನಲ್ಲಿ

ಪಂದ್ಯ 87

ರನ್ 5842

ಸರಾಸರಿ 40.01

ವೈಯಕ್ತಿಕ ಗರಿಷ್ಠ 291

ಏಕದಿನದಲ್ಲಿ

ಪಂದ್ಯ 181

ರನ್ 5804

ಸರಾಸರಿ 42.67

ವೈಯಕ್ತಿಕ ಗರಿಷ್ಠ 120*

ಒಟ್ಟಾರೆ

20-ಶತಕ,

71-ಅರ್ಧಶತಕ