ಭಾರತೀಯ ಬಾಕ್ಸಿಂಗ್ ಕೌನ್ಸಿಲ್ (ಐಬಿಸಿ)ನ ವಾಣಿಜ್ಯ ವಹಿವಾಟು ನೋಡುತ್ತಿರುವ ಸ್ಪೂರ್ತಿ ಬಾಕ್ಸಿಂಗ್ ಪ್ರೈವೇಟ್ ಲಿಮಿಟೆಡ್‌ನೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ನವದೆಹಲಿ(ಜ.03): ಭಾರತದ ಮಹಿಳಾ ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ಎಲ್. ಸರಿತಾ ದೇವಿ ಮತ್ತು ಕಾಮನ್‌ವೆಲ್ತ್ ಕೂಟದ ಕಂಚು ಪದಕ ವಿಜೇತೆ ಬಾಕ್ಸರ್ ಪಿಂಕಿ ಜಾಂಗ್ರಾ ವೃತ್ತಿ ಬದುಕಿಗೆ ವಿದಾಯ ಹೇಳುವ ನಿರ್ಧಾರ ಕೈಗೊಂಡಿದ್ದಾರೆ. ಆದರೆ ಅಮೆಚೂರ್‌ನೊಂದಿಗಿನ ಸಂಬಂಧವನ್ನು ಮುಂದುವರಿಸಲಿದ್ದಾರೆ.

ಮಾಜಿ ರಾಷ್ಟ್ರೀಯ ಚಾಂಪಿಯನ್ ಬಾಕ್ಸರ್ ಸರಿತಾ ದೇವಿ, ಭಾರತೀಯ ಬಾಕ್ಸಿಂಗ್ ಕೌನ್ಸಿಲ್ (ಐಬಿಸಿ)ನ ವಾಣಿಜ್ಯ ವಹಿವಾಟು ನೋಡುತ್ತಿರುವ ಸ್ಪೂರ್ತಿ ಬಾಕ್ಸಿಂಗ್ ಪ್ರೈವೇಟ್ ಲಿಮಿಟೆಡ್‌ನೊಂದಿಗಿನ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.

ಸದ್ಯ ರೋಟಕ್‌ನ ಬಾಕ್ಸಿಂಗ್ ಅಕಾಡೆಮಿಯಲ್ಲಿ ನಡೆಯುತ್ತಿರುವ ಅಭ್ಯಾಸ ಶಿಬಿರದಲ್ಲಿ ಪಿಂಕಿ, ಯುವ ಮಹಿಳಾ ಬಾಕ್ಸರ್‌ಗಳಿಗೆ ತರಬೇತಿ ನೀಡುತ್ತಿದ್ದಾರೆ.