ಅಜ್ಲಾನ್ ಶಾ ಕಪ್: ಕನ್ನಡಿಗ ಉತ್ತಪ್ಪಗೆ ಸ್ಥಾನ

First Published 21, Feb 2018, 6:41 PM IST
Sardar Singh to Lead India at Sultan Azlan Shah Cup in Malaysia
Highlights

ಈ ಟೂರ್ನಿಯಲ್ಲಿ ವಿಶ್ವದ ನಂ.1 ಆಸ್ಟ್ರೇಲಿಯಾ, ನಂ.2 ಅರ್ಜೇಂಟೀನಾ, ಇಂಗ್ಲೆಂಡ್, ಭಾರತ, ಐರ್ಲೆಂಡ್, ಹಾಗೂ ಆತಿಥ್ಯ ವಹಿಸಿರುವ ಮಲೇಷ್ಯಾ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.

ಬೆಂಗಳೂರು(ಫೆ.21): ಮಾರ್ಚ್ 3ರಿಂದ 10 ರವರೆಗೆ ಮಲೇಷ್ಯಾದಲ್ಲಿ ನಡೆಯಲಿರುವ 27ನೇ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಗೆ 18 ಆಟಗಾರರ ಭಾರತ ತಂಡ ಪ್ರಕಟಗೊಂಡಿದೆ.

ಮನ್‌ಪ್ರೀತ್ ಸೇರಿದಂತೆ ಕೆಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದ್ದು, ಸರ್ದಾರ್ ಸಿಂಗ್‌'ಗೆ ಮತ್ತೆ ನಾಯಕತ್ವ ನೀಡಲಾಗಿದೆ. ಕನ್ನಡಿಗ ಎಸ್.ಕೆ ಉತ್ತಪ್ಪ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಿರಿಯರ ತಂಡದಲ್ಲಿದ್ದ 3 ಆಟಗಾರರಿಗೆ ಹಿರಿಯರ ತಂಡದಲ್ಲಿ ಆಡಲು ಅವಕಾಶ ನೀಡಲಾಗಿದೆ.

ಈ ಟೂರ್ನಿಯಲ್ಲಿ ವಿಶ್ವದ ನಂ.1 ಆಸ್ಟ್ರೇಲಿಯಾ, ನಂ.2 ಅರ್ಜೇಂಟೀನಾ, ಇಂಗ್ಲೆಂಡ್, ಭಾರತ, ಐರ್ಲೆಂಡ್, ಹಾಗೂ ಆತಿಥ್ಯ ವಹಿಸಿರುವ ಮಲೇಷ್ಯಾ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.

ತಂಡ: ಸೂರಜ್ ಕರ್ಕೆರಾ, ಕೃಷನ್, ಅಮಿತ್ ರೋಹಿದಾಸ್, ದೀಪ್ಸನ್ ಟಿರ್ಕೆ, ವರುಣ್ ಕುಮಾರ್, ಸುರೇಂದರ್, ನೀಲಂ ಸಂಜೀಪ್, ಮಂದೀಪ್ ಮೊರ್, ಎಸ್.ಕೆ. ಉತ್ತಪ್ಪ, ಸರ್ದಾರ್ ಸಿಂಗ್ (ನಾಯಕ), ಸುಮಿತ್, ನೀಲಕಂಠ ಶರ್ಮಾ, ಸಿಮ್ರನ್‌ಜೀತ್ ಸಿಂಗ್, ಗುರ್ಜಂತ್, ರಮಣ್‌ದೀಪ್, ತಲ್ವಿಂದರ್ ಸಿಂಗ್, ಸುಮಿತ್ ಕುಮಾರ್ (ಜೂ.), ಶೀಲಾನಂದ ಲಾಕ್ರಾ.

 

loader