ತಿರು​ವ​ನಂತ​ಪು​ರಂ[ಸೆ.01]: ದಕ್ಷಿಣ ಆಫ್ರಿಕಾ ‘ಎ’ ವಿರು​ದ್ಧದ 2ನೇ ಅನ​ಧಿ​ಕೃತ ಏಕ​ದಿನ ಪಂದ್ಯದಲ್ಲಿ ಭಾರತ ‘ಎ’ 2 ವಿಕೆ​ಟ್‌​ಗಳಿಂದ ಗೆಲುವು ಸಾಧಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದಿದೆ. 

ಅನಧಿಕೃತ ಒನ್ ಡೇ: ಭಾರತ ’ಎ’ಗೆ 69 ರನ್ ಜಯ

ಮಳೆ​ಯಿಂದಾಗಿ ಹೊರಾಂಗಣ ಮೈದಾನ ಒದ್ದೆ​ಯಾ​ಗಿದ್ದರಿಂದ ಬೆಳಗ್ಗೆ 9.30ಕ್ಕೆ ಆರಂಭ​ವಾ​ಗ​ಬೇ​ಕಿದ್ದ ಪಂದ್ಯ ಮಧ್ಯಾಹ್ನ 1.45ಕ್ಕೆ ಆರಂಭ​ವಾ​ಯಿ​ತು. ಪಂದ್ಯವನ್ನು 21 ಓವರ್‌ಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟ್‌ ಮಾಡಿದ ದ.ಆಫ್ರಿಕಾ ಜಾರ್ಜ್ ಲಿಂಡೆ (52) ಅರ್ಧ​ಶ​ತ​ಕದಿಂದಾಗಿ 21 ಓವ​ರಲ್ಲಿ 5 ವಿಕೆಟ್‌ಗೆ 162 ರನ್‌ಗಳಿಸಿತು. 

ಭಾರತ ’ಎ’ ಪರ ಕಣಕ್ಕಿಳಿಯಲು ರೆಡಿಯಾದ ಶಿಖರ್ ಧವನ್

ಈ ಸವಾಲಿನ ಗುರಿ ಬೆನ್ನತ್ತಿದ ಭಾರತ ಇಶಾನ್‌ ಕಿಶನ್‌ (55 ರನ್‌, 24 ಎಸೆತ) ನೆರವಿನಿಂದ ಇನ್ನು 6 ಎಸೆತ ಬಾಕಿ ಇರುವಂತೆ 8 ವಿಕೆಟ್‌ಗೆ 163 ರನ್‌ಗಳಿಸಿ ಜಯದ ನಗೆ ಬೀರಿತು. ಇನ್ನು ಮೂರನೇ ಏಕದಿನ ಪಂದ್ಯ ಸೆಪ್ಟೆಂಬರ್ 02ರಂದು ನಡೆಯಲಿದೆ. 

ಸ್ಕೋರ್‌:

ದ.ಆಫ್ರಿಕಾ ‘ಎ’ 162/5,

ಭಾರತ ‘ಎ’ 163/8