ಭಾರತ-ದ.ಆ​ಫ್ರಿಕಾ ‘ಎ​’ 4ನೇ ಪಂದ್ಯಕ್ಕೆ ಮಳೆ ಕಾಟ

ಭಾರತ ’ಎ’ ಹಾಗೂ ದಕ್ಷಿಣ ಆಫ್ರಿಕಾ ’ಎ’ ನಡುವಿನ ನಾಲ್ಕನೇ ಅನಧಿಕೃತ ಏಕದಿನ ಪಂದ್ಯ ಮಳೆಯಿಂದಾಗಿ ಗುರುವಾರಕ್ಕೆ ಮುಂದೂಡಲ್ಪಟ್ಟಿದೆ. ಶಿಖರ್ ಧವನ್ ಅಜೇಯ 33 ರನ್ ಬಾರಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

India A vs South Africa A unofficial ODIs Shikhar Dhawan hits fluent 34 before rain pushes match Thursday

ತಿರುವನಂತಪುರಂ(ಸೆ.05): ಭಾರತ ‘ಎ’ ಹಾಗೂ ಪ್ರವಾಸಿ ದಕ್ಷಿಣ ಆಫ್ರಿಕಾ ‘ಎ’ ನಡುವಿನ 4ನೇ ಅನಧಿಕೃತ ಏಕದಿನಕ್ಕೆ ಮಳೆ ಅಡ್ಡಿಪಡಿಸಿದ್ದು, ಪಂದ್ಯ​ವನ್ನು ಮೀಸ​ಲು ದಿನವಾದ ಗುರುವಾರಕ್ಕೆ ಮುಂದೂಡಲಾಗಿದೆ. 

ಮಳೆಯಿಂದಾಗಿ ಪಂದ್ಯ​ವನ್ನು ತಲಾ 25 ಓವರ್‌ಗಳಿಗೆ ಕಡಿತಗೊಳಿ​ಸ​ಲಾಯಿತು. ಮೊದಲು ಬ್ಯಾಟ್‌ ಮಾಡಿದ ದಕ್ಷಿಣ ಆಫ್ರಿಕಾ ‘ಎ’ 25 ಓವರಲ್ಲಿ 1 ವಿಕೆಟ್‌ ನಷ್ಟಕ್ಕೆ 137 ರನ್‌ ಪೇರಿಸಿತು. ಆಫ್ರಿಕಾ ಪರ ರೀಝಾ ಹೆಂಡ್ರಿ​ಕ್ಸ್‌ 60, ಮ್ಯಾಥ್ಯೂ ಬ್ರೀಸ್ಕೆ 25 ಹಾಗೂ ಹೆನ್ರಿಚ್‌ ಕ್ಲಾಸೆನ್‌ ಅಜೇಯ 21 ರನ್‌ ಗಳಿಸಿದರು. 

ಅನಧಿಕೃತ ಏಕ​ದಿನ: ಭಾರತ ‘ಎ’ಗೆ 2 ವಿಕೆಟ್‌ ಜಯ

ವಿಜೆಡಿ ನಿಯ​ಮ​ದ​ನ್ವ​ಯ ಭಾರತಕ್ಕೆ 25 ಓವ​ರಲ್ಲಿ 193 ರನ್‌ ಗುರಿ ನೀಡ​ಲಾ​ಗಿದ್ದು, ಮಳೆಯಿಂದ ಆಟ ನಿಂತಾಗ ಭಾರತ 7.4 ಓವ​ರಲ್ಲಿ 1 ವಿಕೆಟ್‌ಗೆ 56 ರನ್‌ ಗಳಿ​ಸಿತ್ತು. ಶುಭ್’ಮನ್ ಗಿಲ್ 12 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. 

ಭಾರತ ’ಎ’ ಪರ ಕಣಕ್ಕಿಳಿಯಲು ರೆಡಿಯಾದ ಶಿಖರ್ ಧವನ್

ಗುರು​ವಾರ 17.2 ಓವ​ರಲ್ಲಿ ಭಾರತ ‘ಎ’ 137 ರನ್‌ ಗಳಿ​ಸ​ಬೇ​ಕಿದೆ. ಶಿಖರ್ ಧವನ್ 33 ಹಾಗೂ ಪ್ರಶಾಂತ್ ಚೋಪ್ರಾ 6 ರನ್ ಬಾರಿಸಿ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.  ಸರ​ಣಿ​ಯಲ್ಲಿ ಭಾರತ 3-0 ಮುನ್ನಡೆಯಲ್ಲಿದೆ.
 

Latest Videos
Follow Us:
Download App:
  • android
  • ios