ನವದೆಹಲಿ[ಸೆ.10]: ಕ್ರಿಕೆಟಿಗ ಸಂಜು ಸ್ಯಾಮ್ಸನ್ ತಮ್ಮ ಪ್ರೇಯಸಿ ಚಾರು ಅವರೊಂದಿಗೆ ವರ್ಷಾಂತ್ಯದಲ್ಲಿ ಹಸೆಮಣೆ ಏರಲಿದ್ದಾರೆ. ಸಂಜು ಈ ವಿಷಯವನ್ನು ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಬಹಿರಂಗಪಡಿಸಿದ್ದಾರೆ. ಸಂಜು ಮತ್ತು ಚಾರು, 5 ವರ್ಷಗಳಿಂದ ಪ್ರೀತಿಸುತ್ತಿದ್ದಾರೆ. 

‘ನಮ್ಮ ಪ್ರೀತಿಯನ್ನು ಸಂತೋಷದಿಂದ ಒಪ್ಪಿಕೊಂಡಿದ್ದಕ್ಕೆ ನಮ್ಮ ತಂದೆ-ತಾಯಿಗೆ ಧನ್ಯವಾದ. ಚಾರು ಅವರನ್ನು ಪಡೆಯಲು ನಾನು ಪುಣ್ಯ ಮಾಡಿದ್ದೆ’ ಎಂದು ಫೇಸ್‌ಬುಕ್‌ನಲ್ಲಿ ಸಂಜು ಬರೆದುಕೊಂಡಿದ್ದಾರೆ. ಚಾರು ಅವರ ತಂದೆ ಬಿ. ರಮೇಶ್ ಕುಮಾರ್ ಹಿರಿಯ ಪತ್ರಕರ್ತರಾಗಿದ್ದು, ಡಿಸೆಂಬರ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. 

2013ರ ಆಗಸ್ಟ್ 22ರಂದು ರಾತ್ರಿ 11:11ಕ್ಕೆ ಸಂಜು ಸ್ಯಾಮ್ಸನ್, ಚಾರುಗೆ ಹಾಯ್ ಎಂದು ಸಂದೇಶ ಕಳಿಸಿದ್ದರು, ಅದಾಗಿ ಸರಿಸುಮಾರು 5 ವರ್ಷಗಳ ಬಳಿಕ ಇದೀಗ ಡಿಸೆಂಬರ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ.

ಇದನ್ನು ಓದಿ: ಸಂಜು ಸಾಮ್ಸನ್ ಸೇರಿದಂತೆ 13 ಕ್ರಿಕೆಟಿಗರಿಗೆ ಶೋಕಾಸ್ ನೋಟಿಸ್

ಚಾರು ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರೆ, ಸಂಜು ಸ್ಯಾಮ್ಸನ್ ಈ ಬಾರಿಯ ಐಪಿಎಲ್’ನಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಸಂಜು 2015ರಲ್ಲಿ ಜಿಂಬಾಬ್ವೆ ವಿರುದ್ಧ ಏಕೈಕ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.