ಸಂಜು ಸಾಮ್ಸನ್ ಸೇರಿದಂತೆ 13 ಕ್ರಿಕೆಟಿಗರಿಗೆ ಶೋಕಾಸ್ ನೋಟಿಸ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 15, Aug 2018, 8:32 PM IST
cricketer Sanju samson issued Show cause notice
Highlights

ಪ್ರತಿಭಾವಂತ ಕ್ರಿಕೆಟಿಗ ಸಂಜು ಸಾಮ್ಸನ್‌ ಕ್ರಿಕೆಟ್‌ನಲ್ಲಿ ಹೆಚ್ಚು ಜನಪ್ರೀಯರಾಗುತ್ತಿದ್ದಂತೆ ಅಷ್ಟೇ ವಿವಾದಕ್ಕೂ ಕಾರಣರಾಗುತ್ತಿದ್ದಾರೆ. ಈಗಾಗಲೇ ಬಿಸಿಸಿಐನಿಂದ ಎಚ್ಚರಿಕೆ ಪಡೆದಿರುವ ಸಂಜು ಸಾಮ್ಸನ್ ಇದೀಗ ಮತ್ತೊಂದು ನೋಟಿಸ್ ಪಡೆದಿದ್ದಾರೆ. ಏನಿದು ಪ್ರಕರಣ? ಇಲ್ಲಿದೆ.

ಕೊಚ್ಚಿ(ಆ.15): ಕ್ರಿಕೆಟಿಗ ಸಂಜು ಸಾಮ್ಸನ್ ಸೇರಿದಂತೆ ಕೇರಳ ತಂಡದ 13 ಕ್ರಿಕೆಟಿಗರಿಗೆ ಕೇರಳಾ ಕ್ರಿಕೆಟ್ ಸಂಸ್ಥೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ.  ನಿಮಯ ಮೀರಿ ವರ್ತಿಸಿದ ಕಾರಣಕ್ಕಾಗಿ ಕೇರಳಾ ಕ್ರಿಕೆಟಿಗರು ಇದೀಗ ಸಂಕಷ್ಟ ಅನುಭವಿಸುವಂತಾಗಿದೆ.

ಕೇರಳ ನಾಯಕ ಸಚಿನ್ ಬೇಬಿ ವಿರುದ್ಧ ಸಂಜು ಸಾಮ್ಸನ್ ಸೇರಿದಂತೆ 13 ಕ್ರಿಕೆಟಿಗರು ಆಧಾರ ರಹಿತ ದೂರು ನೀಡಿದ್ದರು. ಸಚಿನ್ ಬೇಬಿ ತಂಡದ ಏಕತೆ ಒಡೆಯುತ್ತಿದ್ದಾರೆ. ಸಚಿನ್ ಬೇಬಿಯಲ್ಲಿ ನಾಯಕತ್ವ ಗುಣವಿಲ್ಲ ಹಾಗೂ ಸ್ವಹಿತಾಸಕ್ತಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಕೇರಳಾ ಕ್ರಿಕೆಟ್ ಸಂಸ್ಥೆಗೆ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ಕೇರಳಾ ಕ್ರಿಕೆಟ್ ಸಂಸ್ಥೆ ತನಿಖೆ ನಡೆಸಿತ್ತು. ಆದರೆ ತಂಡಡ ಆಟಗಾರರ ವಿಚಾರಣೆ ಕೂಡ ನಡೆಸಿತ್ತು. ತನಿಖೆಯ ಪ್ರಕಾರ ಸಚಿನ್ ಬೇಬಿ ವಿರುದ್ಧ ನೀಡಿರುವ ದೂರ ಆಧಾರ ರಹಿತ ಎಂದು ಬಯಲಾಗಿದೆ. ಹೀಗಾಗಿ ಕೇರಳಾ ಕ್ರಿಕೆಟ್ ಸಂಸ್ಥೆ ಸಂಜು ಸಾಮ್ಸನ್ ಹಾಗೂ ಇತರ 12 ಕ್ರಿಕೆಟಿಗರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದೆ. 

loader