ಡಬಲ್ಸ್‌'ನಲ್ಲಿ ನಂ.1 ಸ್ಥಾನದೊಂದಿಗೆ ವರ್ಷವನ್ನು ಆರಂಭಿಸಿದ್ದ ಸಾನಿಯಾ, 9ನೇ ಸ್ಥಾನದಲ್ಲಿ ವರ್ಷವನ್ನು ಅಂತ್ಯಗೊಳಿಸುತ್ತಿದ್ದಾರೆ. ಕಳೆದೊಂದು ವರ್ಷದ ನನ್ನ ಪ್ರದರ್ಶನ ನನಗೆ ತೃಪ್ತಿ ತಂದುಕೊಟ್ಟಿದೆ ಎಂದು ಸಾನಿಯಾ ಹೇಳಿದ್ದಾರೆ.

ಮುಂಬೈ(ನ.13): ಭಾರತದ ತಾರಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಮೊಣಕಾಲು ನೋವಿನಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆಯೋ ಇಲ್ಲವೋ ಎಂಬುದರ ಕುರಿತು ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವೆ ಎಂದಿದ್ದಾರೆ.

‘ವರ್ಷದಿಂದ ನನ್ನ ಜೊತೆಗಾರರು ಗಾಯದ ಸಮಸ್ಯೆಗೆ ಒಳಗಾಗುತ್ತಿದ್ದರು. ಇದೀಗ ನಾನೇ ಮೊಣಕಾಲಿನ ನೋವಿಗೆ ಗುರಿಯಾಗಿದ್ದೇನೆ. ಕಳೆದ ಒಂದು ತಿಂಗಳಿಂದ ವಿಶ್ರಾಂತಿ ಪಡೆಯುತ್ತಿರುವೆ. ಶಸ್ತ್ರಚಿಕಿತ್ಸೆ ಬೇಕೋ, ಬೇಡವೋ ಎಂಬುದನ್ನು ನೋಡಿ ತೀರ್ಮಾನಿಸುವೆ’ ಎಂದು ಹೇಳಿದ್ದಾರೆ.

ಡಬಲ್ಸ್‌'ನಲ್ಲಿ ನಂ.1 ಸ್ಥಾನದೊಂದಿಗೆ ವರ್ಷವನ್ನು ಆರಂಭಿಸಿದ್ದ ಸಾನಿಯಾ, 9ನೇ ಸ್ಥಾನದಲ್ಲಿ ವರ್ಷವನ್ನು ಅಂತ್ಯಗೊಳಿಸುತ್ತಿದ್ದಾರೆ. ಕಳೆದೊಂದು ವರ್ಷದ ನನ್ನ ಪ್ರದರ್ಶನ ನನಗೆ ತೃಪ್ತಿ ತಂದುಕೊಟ್ಟಿದೆ ಎಂದು ಸಾನಿಯಾ ಹೇಳಿದ್ದಾರೆ.