ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದಲ್ಲಿ ಸಾನಿಯಾ ಜೋಡಿ ಮೊದಲ ಸೆಟ್ ತನ್ನದಾಗಿಸಿಕೊಂಡಿತು. ಆದರೆ 2ನೇ ಸೆಟ್ ಅನ್ನು 1-6 ಅಂತರದಿಂದ ಸುಲಭವಾಗಿ ಬಿಟ್ಟುಕೊಟ್ಟಿತು.

ಬೀಜಿಂಗ್(ಅ.7): ಭಾರತದ ಸಾನಿಯಾ ಮಿರ್ಜಾ ಹಾಗೂ ಚೀನಾದ ಶುಯಿ ಪೆಂಗ್ ಜೋಡಿ ಚೀನಾ ಓಪನ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್‌'ನ ಸೆಮಿಫೈನಲ್‌'ನಲ್ಲಿ ಸೋಲನುಭವಿಸಿದೆ.

ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಸಾನಿಯಾ ಜೋಡಿ ಸ್ಲೊವಾಕಿಯಾದ ಮಾರ್ಟಿನಾ ಹಿಂಗೀಸ್ ಹಾಗೂ ತೈವಾನ್‌'ನ ಚಾನ್ ಯಂಗ್- ಜಾನ್ ಜೋಡಿ ವಿರುದ್ಧ 6-2, 1-6, 5-10 ಸೆಟ್‌'ಗಳಿಂದ ಸೋಲುಂಡಿತು. ಈ ಮೂಲಕ ಚೀನಾ ಓಪನ್‌ನಿಂದ ಹೊರ ನಡೆಯಿತು.

ತೀವ್ರ ಹಣಾಹಣಿಯಿಂದ ಕೂಡಿದ ಪಂದ್ಯದಲ್ಲಿ ಸಾನಿಯಾ ಜೋಡಿ ಮೊದಲ ಸೆಟ್ ತನ್ನದಾಗಿಸಿಕೊಂಡಿತು. ಆದರೆ 2ನೇ ಸೆಟ್ ಅನ್ನು 1-6 ಅಂತರದಿಂದ ಸುಲಭವಾಗಿ ಬಿಟ್ಟುಕೊಟ್ಟಿತು. ಅಂತಿಮ ಹಾಗೂ ಕೊನೆಯ ನಿರ್ಣಾಯಕ ಸೆಟ್‌'ನಲ್ಲಿ ಅಂಕ ಗಳಿಸಲು ಎರಡೂ ಜೋಡಿ ಸಾಕಷ್ಟು ಬೆವರು ಹರಿಸಿತು. ಅಂತಿಮವಾಗಿ ಹಿಂಗೀಸ್ ಜೋಡಿ ಎದುರು ಸಾನಿಯಾ ಜೋಡಿ ಶರಣಾಯಿತು.