ಹೈದರಬಾದ್(ಅ.31): ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಂಗಳವಾರ(ಅ.30) ಗಂಡು ಮಗುವಿಗೆ ಜನ್ಮ ನೀಡಿದ್ದರು. ಸಾನಿಯಾ ಹಾಗೂ ಪಾಕಿಸ್ತಾನ ಕ್ರಿಕೆಟಿಗ ಶೋಯೆಬ್ ಮಲಿಕ್ ದಂಪತಿಗೆ ಕ್ರಿಕೆಟ್ ಹಾಗೂ ಬಾಲಿವುಡ್ ದಿಗ್ಗಜರು ಶುಭಾಶಯ ಕೋರಿದ್ದರು.

ಇದೇ ವೇಳೆ ಟೀಂ ಇಂಡಿಯಾ ಕ್ರಿಕೆಟಿಗ ಪ್ರಗ್ಯಾನ್ ಓಜಾ ಕೂಡ ಶುಭಾಶಯ ಕೋರಿ ಕುತೂಹಲಕಾರಿ ಪ್ರಶ್ನೆಯೊಂದನ್ನ ಕೇಳಿದ್ದಾರೆ. ಮಗು ಟೆನಿಸ್ ಪಟು ಅಥವಾ ಕ್ರಿಕೆಟರ್ ಎಂದು ಪ್ರಗ್ಯಾನ್ ಓಜಾ ಟ್ವೀಟ್ ಮಾಡಿದ್ದರು.

 

 

ಇದಕ್ಕೆ ಪ್ರತಿಕ್ರಿಯಿಸಿದ ಶೋಯೆಬ್ ಮಲ್ಲಿಕ್, ಟೆನಿಸ್ ಹಾಗೂ ಕ್ರಿಕೆಟ್ ಎರಡೂ ಎಂದು ಉತ್ತರಿಸಿದ್ದಾರೆ. 

 

 

ಸಾನಿಯಾ ಗಂಡು ಮಗುವಿಗೆ ಜನ್ಮ ನೀಡಿದ ಬಳಿಕ ಪತಿ ಶೋಯೆಬ್ ಮಲಿಕ್ ಟ್ವೀಟ್ ಮೂಲಕ ಸಂತಸವನ್ನ ಹಂಚಿಕೊಂಡಿದ್ದರು. ನಮಗೆ ಗಂಡು ಮಗುವಾಗಿದೆ ಎಂದು ತಿಳಿಸಲು ಅತೀವ ಸಂತೋಷವಾಗುತ್ತಿದೆ. ತಾಯಿ-ಮಗು ಆರೋಗ್ಯವಾಗಿದ್ದಾರೆ, ಎಲ್ಲರ ಪ್ರಾರ್ಥನೆ ಹಾರೈಕೆಗಳಿಗೆ ನಾವು ಆಭಾರಿಗಳಾಗಿದ್ದೇವೆ ಎಂದು ಮಲಿಕ್ ಟ್ವೀಟ್ ಮಾಡಿದ್ದರು.

 

 

ಸಾನಿಯಾ-ಮಲಿಕ್ ಜೋಡಿ 2010ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದೇ ಏಪ್ರಿಲ್ ತಿಂಗಳಲ್ಲಿ ಸಾನಿಯಾ ಗರ್ಭಿಣಿಯಾಗಿರುವುದನ್ನು ಖಚಿತಪಡಿಸಿದ್ದರು. ಹೀಗಾಗಿ ಕೆಲವು ತಿಂಗಳುಗಳಿಂದಲೇ ಟೆನಿಸ್’ನಿಂದ ಹೊರಗುಳಿದಿದ್ದರು. 2020ರ ಟೋಕಿಯೊ ಒಲಿಂಪಿಕ್ಸ್ ವೇಳೆಗೆ ಸಾನಿಯಾ ಕಣಕ್ಕಿಳಿಯುವ ಸಾಧ್ಯತೆಯಿದೆ.