ಪಂದ್ಯಾವಳಿಯ ಆರಂಭದಿಂದಲೇ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದ ಸ್ವಿಸ್ ತೈವಾನ್ ಜೋಡಿ ಸುಲಭವಾಗಿ ಸಾನಿಯಾ-ಕರ್ಸ್ಟನ್'ರನ್ನು ಮಣಿಸಿದರು.

ಲಂಡನ್(ಜು.10): ಭಾರತ ಅಗ್ರ ಟೆನಿಸ್ ತಾರೆ ಸಾನಿಯಾ ಮಿರ್ಜಾ ಮಹಿಳೆಯರ ಡಬಲ್ಸ್'ನಲ್ಲಿ ಸೋಲುವ ಮೂಲಕ ವಿಂಬಲ್ಡನ್ ಮಹಿಳೆಯರ ಡಬಲ್ಸ್'ನಲ್ಲಿ ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.

ಈ ಮೊದಲು ಪೇಸ್ ಜೋಡಿ ಹಾಗೂ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ನಿರಾಸೆ ಮೂಡಿಸಿದ್ದರು. ಇದೀಗ ಮಹಿಳಾ ಡಬಲ್ಸ್‌ನಲ್ಲೂ ಭಾರತಕ್ಕೆ ನಿರಾಸೆ ಎದುರಾಗಿದೆ. ಸಾನಿಯಾ ಮಿರ್ಜಾ ಹಾಗೂ ಬೆಲ್ಜಿಯಂನ ಕರ್ಸ್ಟನ್ ಫ್ಲಿಪ್ಕೆನ್ಸ್ ಜೋಡಿ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಜೋಡಿಯಾದ ಸ್ವಿಟ್ಜರ್‌'ಲ್ಯಾಂಡ್‌'ನ ಮಾರ್ಟಿನಾ ಹಿಂಗಿಸ್ ಹಾಗೂ ತೈವಾನ್‌'ನ ಚಾನ್ ಯುಂಗ್ ಜಾನ್ ಜೋಡಿ ವಿರುದ್ಧ 2-6, 4-6 ನೇರ ಸೆಟ್‌'ಗಳಲ್ಲಿ ಪರಾಭವಗೊಂಡಿತು.

ಪಂದ್ಯಾವಳಿಯ ಆರಂಭದಿಂದಲೇ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದ ಸ್ವಿಸ್ ತೈವಾನ್ ಜೋಡಿ ಸುಲಭವಾಗಿ ಸಾನಿಯಾ-ಕರ್ಸ್ಟನ್'ರನ್ನು ಮಣಿಸಿದರು.

ಸಾನಿಯಾ ಮಿಶ್ರ ಡಬಲ್ಸ್‌'ನಲ್ಲಿ ಕ್ರೊಯೆಷಿಯಾದ ಇವಾನ್ ಡಾಡಿಗ್ ಜತೆ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಮಂಗಳವಾರ ಬ್ರಿಟನ್‌'ನ ವ್ಯಾಟ್ಸನ್ ಹಾಗೂ ಫಿನ್‌'ಲೆಂಡ್‌'ನ ಕಾಂಟಿನೆನ್ ಜೋಡಿ ವಿರುದ್ಧ ಸೆಣಸಾಡಲಿದ್ದಾರೆ.