Asianet Suvarna News Asianet Suvarna News

ಸಾನಿಯಾ ಫೋಟೋ, ಪಿ.ಟಿ ಉಷಾ ಹೆಸರು! ಆಂಧ್ರ ಸರ್ಕಾರದ ಎಡವಟ್ಟು

ರಾಷ್ಟ್ರೀಯ ಕ್ರೀಡಾ ದಿನದಂದು ಭಾರೀ ಎಡವಟ್ಟು ನಡೆದಿದ್ದು, ಆಂಧ್ರ ಪ್ರದೇಶ ಸರ್ಕಾರ ಟೆನಿಸ್ ಪಟು ಸಾನಿಯಾ ಮಿರ್ಜಾ ಫೋಟೋ ಹಾಕಿ, ಅಥ್ಲೇಟಿಕ್ಸ್ ಪಿ.ಟಿ ಉಷಾ ಎಂದು ಹೆಸರು ಬರೆದಿರುವುದು ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 

Sania Mirza Identified As PT Usha On Sports Day Poster In Andhra Pradesh Government Advertisement
Author
Vishakhapatnam, First Published Aug 31, 2019, 3:35 PM IST
  • Facebook
  • Twitter
  • Whatsapp

ವಿಶಾಖಪಟ್ಟಣಂ(ಆ.31]: ರಾಷ್ಟ್ರೀಯ ಕ್ರೀಡಾ ದಿನದಂದು ವೈಎಸ್‌ಆರ್ ಪಕ್ಷ ನಗರದಲ್ಲಿ ಹಾಕಿದ ಪೋಸ್ಟರ್‌ವೊಂದರಲ್ಲಿ ಭಾರೀ ಎಡವಟ್ಟಾಗಿದೆ. 

ಸ್ಥಳೀಯ ವಾಕ್ಥಾನ್ ಆಯೋಜನೆ ವೇಳೆ ಹಾಕಿದ ಪೋಸ್ಟರ್‌ನಲ್ಲಿ ಟೆನಿಸ್ ತಾರೆ ಸಾನಿಯಾ ಮಿರ್ಜಾ ಫೋಟೋ ಕೆಳಗಡೆ ಮಾಜಿ ಓಟಗಾರ್ತಿ ಪಿ.ಟಿ ಉಷಾ ಹೆಸರು ಬರೆಯಲಾಗಿದೆ. ಎಡವಟ್ಟು ತಿಳಿದ ಆಯೋಜಕರು ಪೋಸ್ಟರ್ ತೆಗೆಸಿದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟರ್ ವೈರಲ್ ಆಗಿದೆ.

ಭಾರತೀಯಳ ಕೈಹಿಡಿದ ಪಾಕ್ ಕ್ರಿಕೆಟಿಗನ ಕಾಲೆಳೆದ ಸಾನಿಯಾ!

ಆಂಧ್ರ ಪ್ರದೇಶ ಮುಖ್ಯಮಂತ್ರಿ ವೈ.ಎಸ್ ಜಗನ್ ಮೋಹನ್ ರೆಡ್ಡಿ ಕ್ರೀಡಾಪಟುಗಳನ್ನು ಉತ್ತೇಜಿಸಲು ರಾಷ್ಟ್ರಮಟ್ಟವನ್ನು ಪ್ರತಿನಿಧಿಸುವ ಆಟಗಾರರಿಗೆ ನಗದು ಬಹುಮಾನ ನೀಡುವ ’ವೈಎಸ್ಆರ್ ಕ್ರೀಡಾ ಪ್ರೊತ್ಸಾಹಕಲು’ ಎನ್ನುವ ಯೋಜನೆಯನ್ನು ರಾಷ್ಟ್ರೀಯ ಕ್ರೀಡಾದಿನದಂದೇ ಘೋಷಿಸಿದ್ದಾರೆ.  
 

Follow Us:
Download App:
  • android
  • ios