ತಮ್ಮ ದೇಶಕ್ಕೆ ಸನತ್ ಜಯಸೂರ್ಯ ನೀಡಿದ ಕೊಡುಗೆಯನ್ನು ಪರಿಗಣಿಸಿ ಶ್ರೀಲಂಕಾ ಸರ್ಕಾರವು ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿಯಾದ 'ದೇಶಬಂಧು' ಪ್ರಶಸ್ತಿ ನೀಡಿ ಗೌರವಿಸಿದೆ.

ಕೊಲಂಬೊ(ಮೇ.27): ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ, ತಮ್ಮ ಮಾಜಿ ಸಂಗಾತಿಯೊಂದಿಗೆ ಏಕಾಂತದಲ್ಲಿ ಕಳೆದಿದ್ದ ಅಶ್ಲೀಲ ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಸೋರಿಕೆಯಾಗಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ವಿಡಿಯೋದಲ್ಲಿರುವ ಜಯಸೂರ್ಯ ಅವರ ಮಾಜಿ ಗೆಳತಿ ಪ್ರತಿಕ್ರಿಯಿಸಿದ್ದು ‘‘ಜಯಸೂರ್ಯ ನನ್ನ ವಿರುದ್ಧ ಸೇಡು ತೀರಿಸಿಕೊಳ್ಳುವುದಕ್ಕಾಗಿ ಹೀಗೆ ಮಾಡಿದ್ದಾರೆ. ನಾವಿಬ್ಬರು ಪ್ರೀತಿಸುತ್ತಿದ್ದಾಗ ಈ ವೀಡಿಯೋ ಚಿತ್ರೀಕರಿಸಲಾಗಿತ್ತು. ನನ್ನೊಂದಿಗೆ ಜಗಳವಾಡಿಕೊಂಡು ಅವರು ದೂರವಾದರು. ಈಗ ನನ್ನ ಮರ್ಯಾದೆ ಹಾಳು ಮಾಡಲು ಅವರು ಹೀಗೆ ಮಾಡುತ್ತಿದ್ದಾರೆ’’ ಎಂದು ಹೇಳಿದ್ದಾರೆ.

ತಮ್ಮ ದೇಶಕ್ಕೆ ಸನತ್ ಜಯಸೂರ್ಯ ನೀಡಿದ ಕೊಡುಗೆಯನ್ನು ಪರಿಗಣಿಸಿ ಶ್ರೀಲಂಕಾ ಸರ್ಕಾರವು ದೇಶದ ಮೂರನೇ ಅತ್ಯುನ್ನತ ಪ್ರಶಸ್ತಿಯಾದ 'ದೇಶಬಂಧು' ಪ್ರಶಸ್ತಿ ನೀಡಿ ಗೌರವಿಸಿದೆ.

ಅಶ್ಲೀಲ ವಿಡಿಯೋ ಸೋರಿಕೆ ಕುರಿತಂತೆ ಜಯಸೂರ್ಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.