2017ನೇ ಸಾಲಿನ ಐಪಿಎಲ್'ನಲ್ಲಿ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎನ್ನುವ ಖ್ಯಾತಿಗೆ ಬದ್ರಿ ಪಾತ್ರರಾದರು.

ಬೆಂಗಳೂರು(ಏ.14): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಟಾರ್ ಸ್ಪಿನ್ನರ್ ಸಾಮ್ಯಯಲ್ ಬದ್ರಿ 10ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆಯವ ಮೂಲಕ ಐಪಿಎಲ್'ನಲ್ಲಿ ಈ ಸಾಧನೆ ಮಾಡಿದ 12ನೇ ಆಟಗಾರ ಎನ್ನುವ ಗೌರವಕ್ಕೆ ಭಾಜನರಾದರು.

ಮುಂಬೈ ಇಂಡಿಯನ್ಸ್ ವಿರುದ್ಧ ಇಂದು ನಡೆದ ಪಂದ್ಯದಲ್ಲಿ ಪಾರ್ಥೀವ್ ಪಟೇಲ್, ಮಿಚೆಲ್ ಮೆಕ್'ಲಾರೆನ್ ಹಾಗೂ ರೋಹಿತ್ ಶರ್ಮಾ ಅವರ ವಿಕೆಟ್ ಕಬಳಿಸುವ ಮೂಲಕ 2017ನೇ ಸಾಲಿನ ಐಪಿಎಲ್'ನಲ್ಲಿ ಮೊದಲ ಹ್ಯಾಟ್ರಿಕ್ ವಿಕೆಟ್ ಪಡೆದ ಬೌಲರ್ ಎನ್ನುವ ಖ್ಯಾತಿಗೆ ಬದ್ರಿ ಪಾತ್ರರಾದರು.

ಹೀಗಿತ್ತು ಬದ್ರಿ ಹ್ಯಾಟ್ರಿಕ್ ವಿಕೆಟ್ ಪಡೆದ ಆ ಕ್ಷಣ: