ಚಿನ್ನ ಗೆಲ್ಲುವ ಉಮೇದಿನಲ್ಲಿ ಅಖಾಡಕ್ಕಿಳಿದಿದ್ದ ಮೂವರು ಕುಸ್ತಿಪಟುಗಳು ಜಪಾನ್‌ನ ಆಟಗಾರ್ತಿಯರ ವಿರುದ್ಧವೇ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

ನವದೆಹಲಿ(ಮೇ.12): ಭಾರತದ ಭರವಸೆಯ ಕುಸ್ತಿಪಟು ಸಾಕ್ಷಿ ಮಲ್ಲಿಕ್, ವಿನೀಶ್ ಫೋಗಟ್ ಹಾಗೂ ದಿವ್ಯಾ ಕುಕ್ರಾನ್ ಏಷ್ಯನ್ ಕುಸ್ತಿ ಚಾಂಪಿಯನ್‌'ಶಿಪ್‌'ನಲ್ಲಿ ಬೆಳ್ಳಿ ಪದಕ ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ತೃಪ್ತರಾಗಿದ್ದು, ಚಿನ್ನದ ಪದಕ ಗೆಲ್ಲುವ ಅವಕಾಶವನ್ನು ಕೈ ಚೆಲ್ಲಿದ್ದಾರೆ.

ಚಿನ್ನ ಗೆಲ್ಲುವ ಉಮೇದಿನಲ್ಲಿ ಅಖಾಡಕ್ಕಿಳಿದಿದ್ದ ಮೂವರು ಕುಸ್ತಿಪಟುಗಳು ಜಪಾನ್‌ನ ಆಟಗಾರ್ತಿಯರ ವಿರುದ್ಧವೇ ಸೋಲುಂಡು ಬೆಳ್ಳಿಗೆ ತೃಪ್ತಿಪಟ್ಟುಕೊಂಡಿದ್ದಾರೆ.

ಭಾರೀ ನಿರೀಕ್ಷೆ ಮೂಡಿಸಿದ್ದ ಸಾಕ್ಷಿ ಮಲ್ಲಿಕ್ (60 ಕೆ.ಜಿ) ಜಪಾನ್‌'ನ ರಿಸಾಕೋ ಕವಾಯ್ ವಿರುದ್ಧ 0-10 ಅಂತರದಿಂದ ಸೋಲುವ ಮೂಲಕ 2ನೇ ಸ್ಥಾನ ಪಡೆದುಕೊಂಡರು. ಸಾಕ್ಷಿಯ ಮೇಲೆರಗಿದ ರಿಯೋ ಒಲಿಂಪಿಕ್ ಚಿನ್ನದ ಪದಕ ವಿಜೇತೆ ರಿಸಾಕೋ ಕೇವಲ 2 ನಿಮಿಷ 44 ಸೆಕೆಂಡ್‌'ಗಳಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.

ಇನ್ನು 55 ಕೆ.ಜಿ ವಿಭಾಗದ ಅಂತಿಮ ಹಣಾಹಣಿಯಲ್ಲಿ ಜಪಾನ್‌'ನ ಸೆ ನಾನ್ಜೊ ವಿರುದ್ಧ ವಿನಿಶ್ ಫೋಗಾಟ್ 1-2 ಅಂತರದಿಂದ ಸೋಲುಂಡರು. ಇದರ ಜತೆಗೆ 69 ಕೆ.ಜಿ ವಿಭಾಗದ ಫೈನಲ್ ಪಂದ್ಯದಲ್ಲಿ ದಿವ್ಯಾ ಕುಕ್ರಾನ್ ಜಪಾನ್‌'ನ ಸಾರಾ ಡೊಶೋ ವಿರುದ್ಧ 1-2 ಅಂತರದಿಂದ ಮಂಡಿಯೂರಿದರು.