ರಾಂಚಿ(ಸೆ.20): ಭಾರತದಲ್ಲಿ ವಿದ್ಯುತ್ ಕಡಿತ ಆಶ್ಚರ್ಯವಲ್ಲ. ಹಳ್ಳಿಗಳಲ್ಲಿ ಇದರ ಪರಿಣಾಮ ಹೆಚ್ಚಿದೆ. ದಿನದಲ್ಲಿ 2 ರಿಂದ 3 ಗಂಟೆ ವಿದ್ಯುತ್ ನೀಡಿದರೆ ಹೆಚ್ಚು. ಇದೀಗ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಪತ್ನಿ ಸಾಕ್ಷಿ ಧೋನಿ ಇದೇ ವಿದ್ಯುತ್ ಕಡಿತದಿಂದ ರೋಸಿಹೋಗಿದ್ದಾರೆ. ಪ್ರತಿ ದಿನ ಪವರ್ ಕಟ್ ಸಮಸ್ಯೆ ಅನುಭವಿಸಿ ಇದೀಗ ಟ್ವೀಟ್ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದಾರೆ.

ಇದನ್ನೂ ಓದಿ: ಏರ್‌ಪೋರ್ಟ್ ನೆಲದಲ್ಲೇ ಮಲಗಿದ ಧೋನಿ, ಸಾಕ್ಷಿ!

ರಾಂಚಿಯಲ್ಲಿ ಪ್ರತಿ ದಿನ ಪವರ್ ಕಟ್ ಮಾಡಲಾಗುತ್ತಿದೆ. ಕಳೆದ ತಿಂಗಳಲ್ಲಿ ಮಳೆ ಅನ್ನೋ ಕಾರಣ ನೀಡಿದ್ದರು. ಆದರೆ ಇದೀಗ ಮಳೆ ಇಲ್ಲ. ಬಿಸಿಲು ಇದ್ದರೂ ಪವರ್ ಮಾತ್ರ ನೀಡುತ್ತಿಲ್ಲ. ಈ ಕುರಿತು ಸಾಕ್ಷಿ ಧೋನಿ ಟ್ವೀಟ್ ಮೂಲಕ ತಮ್ಮ ನೋವು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಧೋನಿ ಪತ್ನಿ-ಕೊಹ್ಲಿ ಮಡದಿ ಇಬ್ಬರೂ ಕ್ಲಾಸ್‌ಮೇಟ್ಸ್!

ರಾಂಚಿ ಜನ ಪ್ರತಿ ದಿನ ವಿದ್ಯುತ್ ಕಡಿದಿಂದ ಸಮಸ್ಯೆ ಅನುಭವಿಸುತ್ತಿದ್ದಾರೆ. ಪ್ರತಿ ದಿನ 4 ರಿಂದ 7 ಗಂಟೆ ಸಮಯ ವಿದ್ಯುತ್ ಕಡಿತ ಮಾಡಲಾಗುತ್ತಿದೆ. ಸದ್ಯ 5 ಗಂಟೆಯಿಂದ ವಿದ್ಯುತ್ ಇಲ್ಲ. ಇಂದು ವಿದ್ಯುತ್ ಕಡಿತ ಮಾಡಲು ಯಾವುದೇ ಕಾರಣವಿಲ್ಲ. ಇಂದು ಮಳೆ ಇಲ್ಲ, ವಾತಾವರಣ ಉತ್ತಮವಾಗಿದೆ. ಜೊತೆಗೆ ಯಾವುದೇ ಹಬ್ಬವೂ ಇಲ್ಲ. ಈ ಸಮಸ್ಯೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ಬಂದಿದೆ ಎಂದು ಭಾವಿಸುತ್ತೇನೆ ಎಂದು ಸಾಕ್ಷಿ ಧೋನಿ ಟ್ವೀಟ್ ಮಾಡಿದ್ದಾರೆ.

 

ಸಾಕ್ಷಿ ಟ್ವೀಟ್ ಮಾಡಿದ ಬೆನ್ನಲ್ಲೇ ರಾಂಚಿ ನಿವಾಸಿಗಳು ಸಾಕ್ಷಿ ಮಾತಿಗೆ ಧನಿಗೂಡಿಸಿದ್ದಾರೆ. ತಕ್ಷಣವೇ ಸಮಸ್ಯೆ ಪರಿಹರಿಸಲು ಆಗ್ರಹಿಸಿದ್ದಾರೆ.