ವಿಶ್ವದ ನಂಬರ್ 10 ಆಟಗಾರ್ತಿಯಾಗಿರುವ ಸೈನಾ ನೆಹ್ವಾಲ್ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಬಳಿಕ ಗಳಿಸಿದ ಮೊದಲ ಟೂರ್ನಿ ಗೆಲುವಾಗಿದೆ. ಅಲ್ಲದೇ, ತಮ್ಮ ವೃತ್ತಿಯಲ್ಲಿ ಇದು ಸೈನಾಗೆ 23ನೇ ಪ್ರಶಸ್ತಿಯಾಗಿದೆ.

ಸಾರವಾಕ್, ಮಲೇಷ್ಯಾ(ಜ. 22): ಗಾಯಾಳುವಾಗಿ ಹಲವು ದಿನಗಳಿಂದ ಆಟದಿಂದ ದೂರ ಉಳಿದಿದ್ದ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಮಲೇಷ್ಯಾ ಮಾಸ್ಟರ್ಸ್ ಗ್ರ್ಯಾನ್ ಪ್ರೀ ಗೋಲ್ಡ್ ಪ್ರಶಸ್ತಿ ಸೈನಾ ಮುಡಿಗೇರಿದೆ. ಇಂದು ನಡೆದ ಫೈನಲ್'ನಲ್ಲಿ ಥಾಯ್ಲೆಂಡ್ ಪೋರ್ನಪವೀ ಚೋಚುವೋಂಗ್ ವಿರುದ್ಧ ಸೈನಾ ನೆಹ್ವಾಲ್ 22-20, 22-20ರಿಂದ ರೋಚಕ ಗೆಲುವು ಸಾಧಿಸಿದ್ದಾರೆ. 46 ನಿಮಿಷಗಳ ಕಾಲ ನಡೆದ ಈ ಹಣಾಹಣಿಯಲ್ಲಿ 18 ವರ್ಷದ ಥಾಯ್ಲೆಂಡ್ ಎದುರಾಳಿಯನ್ನು ಮಣಿಸುವ ಮುನ್ನ ಸೈನಾ ಸಾಕಷ್ಟು ಬೆವರು ಹರಿಸಬೇಕಾಯಿತು. 18 ವರ್ಷದ ಆಟಗಾರ್ತಿಯನ್ನು ಸೋಲಿಸಲು ಸೈನಾ ತಮ್ಮೆಲ್ಲಾ ಅನುಭವವನ್ನೂ ಬಳಸಿಕೊಳ್ಳಬೇಕಾಯಿತು.

ವಿಶ್ವದ ನಂಬರ್ 10 ಆಟಗಾರ್ತಿಯಾಗಿರುವ ಸೈನಾ ನೆಹ್ವಾಲ್ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಬಳಿಕ ಗಳಿಸಿದ ಮೊದಲ ಟೂರ್ನಿ ಗೆಲುವಾಗಿದೆ. ಅಲ್ಲದೇ, ತಮ್ಮ ವೃತ್ತಿಯಲ್ಲಿ ಇದು ಸೈನಾಗೆ 23ನೇ ಪ್ರಶಸ್ತಿಯಾಗಿದೆ.