ಇಂದು 27ನೇ ವಸಂತಕ್ಕೆ ಕಾಲಿರಿಸಿದ ಲಂಡನ್ ಒಲಿಂಪಿಕ್ ಪದಕ ವಿಜೇತೆ ಸೈನಾ, ಪ್ರತಿ ಯೋಧರ ಕುಟುಂಬಕ್ಕೆ 50 ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ.

ನವದೆಹಲಿ(ಮಾ.17): ಭಾರತದ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕಳೆದ ವಾರ ಛತ್ತೀಸ್‌'ಗಢದ ಸುಕ್ಮಾದಲ್ಲಿ ನಕ್ಸರ ದಾಳಿಗೆ ಬಲಿಯಾದ 12 ಸಿಆರ್‌'ಪಿಎಫ್ ಯೋಧರ ಕುಟುಂಬಗಳಿಗೆ ಒಟ್ಟು 6 ಲಕ್ಷ ರೂಪಾಯಿ ಧನಸಹಾಯ ಮಾಡಲು ಮುಂದಾಗಿದ್ದಾರೆ.

ಇಂದು 27ನೇ ವಸಂತಕ್ಕೆ ಕಾಲಿರಿಸಿದ ಲಂಡನ್ ಒಲಿಂಪಿಕ್ ಪದಕ ವಿಜೇತೆ ಸೈನಾ, ಪ್ರತಿ ಯೋಧರ ಕುಟುಂಬಕ್ಕೆ 50 ಸಾವಿರ ರೂಪಾಯಿ ನೀಡುವುದಾಗಿ ತಿಳಿಸಿದ್ದಾರೆ.

‘‘ಸೈನಿಕರ ಪ್ರಾಣಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ, ಮೃತ ಯೋಧರ ಕುಟುಂಬಗಳ ಪರಿಸ್ಥಿತಿ ಊಹಿಸಿಕೊಂಡರೆ ಅತೀವ ನೋವಾಗುತ್ತದೆ’’ ಎಂದು ಸೈನಾ ಹೇಳಿದ್ದಾರೆ.

ನಿನ್ನೆಯಷ್ಟೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಹ 12 ಮೃತ ಯೋಧರ ಕುಟುಂಬಗಳಿಗೆ ಒಟ್ಟು 1.08 ಕೋಟಿ ರೂಪಾಯಿ ಧನಸಹಾಯ ಮಾಡಿದ್ದರು.