ಸೈನಾ ಅವರ ಕೆಲ ಅಭಿಮಾನಿಗಳು ಚೀನಾ ಉತ್ಪನ್ನವನ್ನು ಪ್ರಚಾರ ಮಾಡಿ ರಾಷ್ಟ್ರ ವಿರೋಧಿ ಕಾರ್ಯದಲ್ಲಿ ತೊಡಗಬೇಡಿ ಎಂದಿದ್ದಾರೆ.

ನವದೆಹಲಿ(ಡಿ.14): ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್, ಚೀನಾ ಉತ್ಪನ್ನವೊಂದರ ಪ್ರಚಾರ ನಡೆಸುತ್ತಿರುವುದರಿಂದ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಇತ್ತೀಚೇಗಷ್ಟೇ ಸೈನಾ ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌'ನಲ್ಲಿ ಚೀನಾ ಉತ್ಪನ್ನವಾದ ಹಾನರ್ 8 ಮೊಬೈಲ್ ಹಿಡಿದುಕೊಂಡ ಫೋಟೋವನ್ನು ಅಪ್‌'ಲೋಡ್ ಮಾಡಿದ್ದರು. 'ನನ್ನ ಹೊಸ ಹಾನರ್ 8 ಫೋನ್, ಈ ಫೋನ್ ಮತ್ತು ಬಣ್ಣವನ್ನು ಇಷ್ಟಪಡುತ್ತೇನೆ' ಎಂದು ಸೈನಾ ಬರೆದಿದ್ದರು.

ಈ ಸ್ಟೇಟಸ್ ಕಂಡ ಸೈನಾ ಅವರ ಕೆಲ ಅಭಿಮಾನಿಗಳು ಚೀನಾ ಉತ್ಪನ್ನವನ್ನು ಪ್ರಚಾರ ಮಾಡಿ ರಾಷ್ಟ್ರ ವಿರೋಧಿ ಕಾರ್ಯದಲ್ಲಿ ತೊಡಗಬೇಡಿ ಎಂದಿದ್ದಾರೆ. ಇನ್ನು ಕೆಲವರು ನಾನು ನಿಮ್ಮ ಅಭಿಮಾನಿ ಆದರೆ ಚೀನಾ ಉತ್ಪನ್ನದ ಪ್ರಚಾರಕರಾದರೆ ನಿಮ್ಮ ಅಭಿಮಾನಿಯಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.