ಕಠ್ಮಂಡು(ನೇಪಾಳ)(ಸೆ.29): ಅಂಡರ್‌ 18 ಸ್ಯಾಫ್‌ (ಎಸ್‌ಎಎಫ್‌ಎಫ್‌) ಫುಟ್ಬಾಲ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಭಾನುವಾರ ಭಾರತ ಹಾಗೂ ಬಾಂಗ್ಲಾದೇಶ ಕಿರಿಯರ ತಂಡಗಳು ಸೆಣಸಲಿವೆ. ಶುಕ್ರವಾರ ನಡೆದಿದ್ದ ಸೆಮಿಫೈನಲ್‌ನಲ್ಲಿ ಮಾಲ್ಡೀವ್ಸ್ ವಿರುದ್ಧ ಭಾರತ ಕಿರಿಯರು 4-0 ಗೋಲುಗಳಿಂದ ಜಯಿಸಿದ್ದರು. 

 

ಇದನ್ನೂ ಓದಿ: ಫಿಫಾ ವಿಶ್ವಕಪ್ ಕ್ವಾಲಿಫೈಯರ್: ಕತಾರ್ ವಿರುದ್ಧ ಡ್ರಾ ಸಾಧಿಸಿದ ಭಾರತ

7ನೇ ನಿಮಿಷದಲ್ಲಿ ನರೇಂದರ್‌ ಗೆಹ್ಲೋಟ್‌, 79ನೇ ನಿಮಿಷದಲ್ಲಿ ಮನ್ವೀರ್‌ ಸಿಂಗ್‌ ಹಾಗೂ 81ನೇ ನಿಮಿಷದಲ್ಲಿ ನಿಂತೋಯಿನ್ಗಾಂಬಾ ಮೀಟೈ ಗೋಲ್‌ ಹೊಡೆದಿದ್ದರು. 45+1 ನಿಮಿಷದಲ್ಲಿ ಮಾಲ್ಡೀವ್ಸ್‌ನ ಅಹ್ನಾಫ್‌ ರಶೀದ್‌ ಸ್ವಂತ ಗೋಲು ಹೊಡೆದು ಭಾರತ ತಂಡಕ್ಕೆ ಉತ್ತಮ ಅಂತರದಲ್ಲಿ ಜಯ ಸಾಧಿಸುವ ಅವಕಾಶವನ್ನು ಮಾಡಿಕೊಟ್ಟರು. ಮಾಲ್ಡೀವ್‌್ಸ ಪರ ಯಾವೊಬ್ಬ ಆಟಗಾರರು ಗೋಲುಗಳಿಸುವಲ್ಲಿ ಸಫಲರಾಗಲಿಲ್ಲ.