5ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಜುಲೈ 28ರಿಂದ ಆರಂಭವಾಗಲಿದ್ದು, ಸಚಿನ್ ತಂಡ ತಮಿಳು ತಲೈವಾಸ್ ಹಾಗೂ ತೆಲಗು ಟೈಟಾನ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಚೆನ್ನೈ(ಜು.22): ಪ್ರೊ ಕಬಡ್ಡಿಯ ಚೆನ್ನೈ ತಂಡದ ಸಹ ಮಾಲೀಕ ಸಚಿನ್ ತೆಂಡುಲ್ಕರ್ ತಮ್ಮ ಕನಸಿನ ಕಬಡ್ಡಿ ತಂಡದ ರಕ್ಷಣಾತ್ಮಕ ಆಟಗಾರನಾಗಿ ಎಂ.ಎಸ್. ಧೋನಿಯನ್ನು ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ತಮ್ಮತ್ತ ಬರುವ ಯಾವುದೇ ಅವಕಾಶವನ್ನು ಧೋನಿ ಕೈಚೆಲ್ಲುವುದಿಲ್ಲ. ಒಬ್ಬ ನಂಬಿಗಸ್ಥ ಡಿಫೆಂಡರ್ ಅನ್ನು ನನ್ನ ತಂಡಕ್ಕೆ ಸೇರಿಸಿಕೊಳ್ಳುವುದಾದರೆ' ಎಂದು ಸಚಿನ್ ಹೇಳಿದ್ದಾರೆ.

ಕನಸಿನ ತಂಡದ ಸ್ಟಾರ್ ರೈಡರ್ ಯಾರು ಎನ್ನುವ ಪ್ರಶ್ನೆಗೆ ಸಚಿನ್, 'ರೈಡರ್ ಆಗುವನನು ಉಸಿರು ಹಿಡಿದು ಕಬಡ್ಡಿ.. ಕಬಡ್ಡಿ ಎಂದು ಹೇಳಬೇಕಾಗುತ್ತದೆ. ಆ ಸ್ಥಾನಕ್ಕೆ ಗಾಯಕ ಶಂಕರ್ ಮಹದೇವನ್ ಸೂಕ್ತರು' ಎಂದು ತಮಾಷೆ ಮಾಡಿದ್ದಾರೆ.

5ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಟೂರ್ನಿಯು ಜುಲೈ 28ರಿಂದ ಆರಂಭವಾಗಲಿದ್ದು, ಸಚಿನ್ ತಂಡ ತಮಿಳು ತಲೈವಾಸ್ ಹಾಗೂ ತೆಲಗು ಟೈಟಾನ್ಸ್ ತಂಡಗಳು ಉದ್ಘಾಟನಾ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.