Asianet Suvarna News Asianet Suvarna News

ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್‌ಗೆ ಮತ್ತೆ ನಿರಾಸೆ!

ಪುತ್ರನನ್ನ ಕ್ರಿಕೆಟಿಗನನ್ನಾಗಿ ಮಾಡುವ ದಿಗ್ಗಜ ಸಚಿನ್ ತೆಂಡೂಲ್ಕರ್ ಪ್ರಯತ್ನ ಮತ್ತೆ ಹಿನ್ನಡೆಯಾಗಿದೆ. ವಿನು ಮಂಕಡ್ ಟ್ರೋಫಿಯಲ್ಲಿ ಸಚಿನ್ ಪುತ್ರ ಅರ್ಜುನ್ ತೆಂಡೂಲ್ಕರ್ ನಿರಾಸೆ ಅನುಭವಿಸಿದ್ದಾರೆ.

Sachin tendulkar son Arjun Tendulkar goes wicketless in vinoo mankad trophy
Author
Bengaluru, First Published Oct 23, 2018, 10:01 AM IST
  • Facebook
  • Twitter
  • Whatsapp

ಮುಂಬೈ(ಅ.23): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ  ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ತೆಂಡೂಲ್ಕರ್‌ಗೆ ಮತ್ತೆ ನಿರಾಸೆಯಾಗಿದೆ. ಅಂಡರ್ 19 ವಿನೂ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ಅರ್ಜುನ್ ತೆಂಡೂಲ್ಕರ್ ವಿಕೆಟ್ ಕಬಳಿಸುವಲ್ಲಿ ವಿಫಲರಾಗಿದ್ದಾರೆ.

ಯುಪಿ ವಿರುದ್ದದ ಪಂದ್ಯದಲ್ಲಿ ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ವಿಕೆಟ್ ಇಲ್ಲದೆ  ಪರದಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ 203 ರನ್ ಸಿಡಿಸಿದರು. ಆದರೆ ಈ ಮೊತ್ತವನ್ನ ಡಿಫೆಂಡ್ ಮಾಡಿಕೊಳ್ಳಲು ಮುಂಬೈ ಬೌಲರ್‌ಗಳಿಗೆ ಸಾಧ್ಯವಾಗಿಲಿಲ್ಲ.

ಅರ್ಜುನ್ ತೆಂಡೂಲ್ಕರ್ 8 ಓವರ್ ಬೌಲಿಂಗ್ ಮಾಡಿ 32 ರನ್ ನೀಡಿದರು. ಆದರೆ ತಂಡಕ್ಕೆ ಯಶಸ್ಸು ತಂದುಕೊಡಲು ಸಾಧ್ಯವಾಗಿಲಿಲ್ಲ. ಮಂಬೈ ತಂಡವನ್ನ ಮಣಿಸಿದ ಯುಪಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

Follow Us:
Download App:
  • android
  • ios