ಎರಡು ಹೊಸ ಚೆಂಡುಗಳ ಬಳಕೆಯಿಂದಾಗಿ ಡೆತ್ ಓವರ್’ಗಳಲ್ಲಿ ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಬೌಲರ್’ಗಳ ಮಾರಣಹೋಮ ನಡೆಯುತ್ತಿದೆ ಎಂದು ಸಚಿನ್ ತೆಂಡುಲ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ.

ಮುಂಬೈ[ಜೂ.22]: ಏಕದಿನ ಕ್ರಿಕೆಟ್’ನಲ್ಲಿ ಎರಡು ಹೊಸ ಚೆಂಡುಗಳ ಬಳಕೆಯಿಂದಾಗಿ ಆತಂಕ ಎದುರಾಗಿದೆ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಎರಡು ಹೊಸ ಚೆಂಡುಗಳ ಬಳಕೆಯಿಂದಾಗಿ ಡೆತ್ ಓವರ್’ಗಳಲ್ಲಿ ರಿವರ್ಸ್ ಸ್ವಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಬೌಲರ್’ಗಳ ಮಾರಣಹೋಮ ನಡೆಯುತ್ತಿದೆ ಎಂದು ಸಚಿನ್ ತೆಂಡುಲ್ಕರ್ ಆತಂಕ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಪಂದ್ಯವನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಮಾಸ್ಟರ್ ಬ್ಲಾಸ್ಟರ್, ’ಎರಡು ಹೊಸ ಚೆಂಡುಗಳೊಂದಿಗೆ ಕ್ರಿಕೆಟ್ ಆಡುವುದು ಏಕದಿನ ಪಂದ್ಯಗಳ ವಿನಾಶಕ್ಕೆ ಎಡೆ ಮಾಡಿಕೊಡುತ್ತದೆ. ಒಂದು ಕಾಲದಲ್ಲಿ ಡೆತ್ ಓವರ್’ಗಳಲ್ಲಿ ಅವಿಭಾಜ್ಯ ಅಂಗವಾಗಿದ್ದ ರಿವರ್ಸ್ ಸ್ವಿಂಗ್ ಅನ್ನು ಈಗ ಕಾಣುವುದೇ ಅಪರೂಪವಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Scroll to load tweet…

ಇದನ್ನು ಓದಿ:ಸೆಹ್ವಾಗ್ ಕುರಿತು ಅಚ್ಚರಿಯ ಹೇಳಿಕೆ ನೀಡಿದ ತೆಂಡುಲ್ಕರ್

ಸಚಿನ್ ಮಾತಿಗೆ ಸಹಮತ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಿಸ್, ಈ ಕಾರಣಕ್ಕಾಗಿಯೇ ವೇಗದ ಬೌಲರ್ ಸೃಷ್ಟಿಯಾಗುತ್ತಿಲ್ಲ. ನಿಮ್ಮ ಮಾತುಗಳನ್ನು ಒಪ್ಪುತ್ತೇನೆ ಸಚಿನ್. ರಿವರ್ಸ್ ಸ್ವಿಂಗ್ ಬಹುತೇಕ ನಿರ್ನಾಮವಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:ಈ ಎರಡು ತಂಡಗಳು 2019ರ ವಿಶ್ವಕಪ್ ಗೆಲ್ಲಬಹುದು: ವಕಾರ್ ಯೂನಿಸ್

Scroll to load tweet…

ಎರಡು ಹೊಸ ಚೆಂಡುಗಳ ಬಳಕೆ ವಿರುದ್ಧ ಸಚಿನ್ ಹಾಗೂ ವಕಾರ್’ಗಿಂತ ಮೊದಲೇ ವೆಸ್ಟ್’ಇಂಡಿಸ್ ದಂತಕತೆ ಮೈಕಲ್ ಹೋಲ್ಡಿಂಗ್ಸ್ 2015ರಲ್ಲೇ ಕಳವಳ ವ್ಯಕ್ತಪಡಿಸಿದ್ದರು. 
2011ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸಂಸ್ಥೆಯು ಎರಡು ತುದಿಯಿಂದ ಹೊಸ ಚೆಂಡು ಬಳಸಲು ಅವಕಾಶ ನೀಡಿದೆ. ಈ ನಿಯಮ ಬ್ಯಾಟಿಂಗ್ ಸ್ನೇಹಿಯಾಗಿದ್ದು, ಬೌಲರ್’ಗಳು ಸಾಕಷ್ಟು ದಂಡನೆಗೊಳಗಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ, ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾ ವಿರುದ್ಧ 481/6 ರನ್ ಬಾರಿಸಿದ್ದೇ ಸಾಕ್ಷಿ.