ಮುಂಬೈ(ಮೇ.17): ತಮ್ಮ ಬಾಲ್ಯದ ಗೆಳೆಯ ವಿನೋದ್‌ ಕಾಂಬ್ಳಿಗೆ ಸಚಿನ್‌ ತೆಂಡುಲ್ಕರ್‌ ನೆಟ್ಸ್‌ನಲ್ಲಿ ಬೌಲಿಂಗ್‌ ಮಾಡುತ್ತಿರುವ ವಿಡಿಯೋಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ತಮಾಷೆಯಾಗಿ ಪ್ರತಿಕ್ರಿಯಿಸಿತ್ತು.

ನೋ ಬಾಲ್ ಪಜೀತಿ- ಸಚಿನ್ ತೆಂಡುಲ್ಕರ್ ಕಾಲೆಳೆದ ಐಸಿಸಿ

‘ನಿಮ್ಮ ಹೆಜ್ಜೆ ನೋಡಿಕೊಳ್ಳಿ, ನೋಬಾಲ್‌ ಎಸೆದಿದ್ದೀರಿ’ ಎಂದು ಮಾಜಿ ಅಂಪೈರ್‌ ಸ್ಟೀವ್‌ ಬಕ್ನರ್‌ ಫೋಟೋ ಹಾಕಿ ಐಸಿಸಿ ಸಚಿನ್‌ ಕಾಲೆಳೆದಿತ್ತು. ಇದಕ್ಕೆ ಉತ್ತರಿಸಿರುವ ಸಚಿನ್‌, ‘ಈ ಬಾರಿ ನಾನು ಬೌಲ್‌ ಮಾಡುತ್ತಿದ್ದೇನೆ, ಅಂಪೈರ್‌ ನಿರ್ಧಾರ ಯಾವಾಗಲೂ ಅಂತಿಮವೇ?’ ಎಂದಿದ್ದಾರೆ.'

24 ವರ್ಷಗಳ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಸಚಿನ್ ತೆಂಡುಲ್ಕರ್ 34,357 ರನ್ ಬಾರಿಸಿದ್ದಾರೆ. ತಮ್ಮ 16 ವಯಸ್ಸಿನಲ್ಲಿ 1989 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ಪದಾರ್ಪಣೆ ಮಾಡಿದ ಸಚಿನ್ ಟೆಸ್ಟ್(15,921) ಹಾಗೂ ಏಕದಿನ()18,426 ಕ್ರಿಕೆಟ್'ನಲ್ಲಿ ಗರಿಷ್ಠ ರನ್ ಬಾರಿಸಿದ ಸಾಧನೆ ಮಾಡಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.