‘1992 ಮತ್ತು 2003ರ ವಿಶ್ವಕಪ್ ವೇಳೆ ನನ್ನ ತಂಡದ ಸಹ ಆಟಗಾರರೊಂದಿಗೆ ವಿಡಿಯೋ ಪಾರ್ಲರ್‌'ಗೆ ತೆರಳಿರುವ ಮಾಹಿತಿಯನ್ನು ಇದರಲ್ಲಿ ಅಳವಡಿಸಲಾಗಿದೆ. ನನ್ನ ಮಗ ಅರ್ಜುನ್‌'ನೊಂದಿಗೆ ಈ ಗೇಮ್ ಆಡಲು ಇಷ್ಟಪಡುತ್ತೇನೆ’ ಎಂದು ಸಚಿನ್ ಹೇಳಿದ್ದಾರೆ.

ಬೆಂಗಳೂರು(ಡಿ.08): ತಮ್ಮ ಕ್ರಿಕೆಟ್ ಜೀವನದ ಅನುಭವ ಹೊಂದಿರುವ ‘ಸಚಿನ್ ಸಾಗಾ ಕ್ರಿಕೆಟ್ ಚಾಂಪಿಯನ್ಸ್’ ಗೇಮ್‌'ನ್ನು ‘ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಗುರುವಾರ ಬೆಂಗಳೂರಿನಲ್ಲಿ ಅನಾವರಣಗೊಳಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದು ಸಚಿನ್ ಅವರ ಕ್ರಿಕೆಟ್ ಬದುಕಿನ ಸಂಪೂರ್ಣ ಮಾಹಿತಿಯನ್ನು ಅಭಿಮಾನಿಗಳಿಗೆ ಬಿಚ್ಚಿಡಲಿದೆ. ಡಿಜಿಟಲ್ ಎಂಟರ್‌'ಟೇನ್ಮೆಂಟ್ ಗೇಮಿಂಗ್ ಫರ್ಮ್‌'ನಲ್ಲಿ ಮುಂಚೂಣಿಯಲ್ಲಿರುವ ಜೆಟ್‌ಸಿಂಥೇಸ್ ಸಂಸ್ಥೆ ನೂತನ ಮಾದರಿಯ ಈ ಗೇಮಿಂಗ್ ಆ್ಯಪ್‌'ನ್ನು ಸಿದ್ದಪಡಿಸಿದೆ.

‘1992 ಮತ್ತು 2003ರ ವಿಶ್ವಕಪ್ ವೇಳೆ ನನ್ನ ತಂಡದ ಸಹ ಆಟಗಾರರೊಂದಿಗೆ ವಿಡಿಯೋ ಪಾರ್ಲರ್‌'ಗೆ ತೆರಳಿರುವ ಮಾಹಿತಿಯನ್ನು ಇದರಲ್ಲಿ ಅಳವಡಿಸಲಾಗಿದೆ. ನನ್ನ ಮಗ ಅರ್ಜುನ್‌'ನೊಂದಿಗೆ ಈ ಗೇಮ್ ಆಡಲು ಇಷ್ಟಪಡುತ್ತೇನೆ’ ಎಂದು ಸಚಿನ್ ಹೇಳಿದ್ದಾರೆ.