ಮುಂಬೈ(ಸೆ.22): ಭಾರತೀಯ ಕ್ರಿಕೆಟ್ ಅಭಿಮಾನಿಗಳ ಆರಾಧ್ಯ ದೈವ, ಮಾಸ್ಟರ್ ಬ್ಲಾಸ್ಟರ್, ಕ್ರಿಕೆಟ್ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರಿಗೆ ನಿವೃತ್ತಿ ಪಡೆಯುವಂತೆ ಒತ್ತಡ ಹೇರಲಾಗಿತ್ತು ಎನ್ನುವ ಸತ್ಯವನ್ನು ಟೀಮ್ ಇಂಡಿಯಾ ಆಯ್ಕೆ ಸಮಿತಿಯ ಮಾಜಿ ಮುಖ್ಯ ಆಯ್ಕೆಗಾರ ಸಂದೀಪ್ ಪಾಟೀಲ್ ಬಿಚ್ಚಿಟ್ಟಿದ್ದಾರೆ. 

ಏಕದಿನ ಕ್ರಿಕೆಟ್ ನಿಂದ ನಿವೃತ್ತರಾಗದೆ ಹೋಗಿದ್ದರೆ ಸಚಿನ್ ಅವರನ್ನು 2012ರಲ್ಲಿ ತಂಡದಿಂದ ಕೈ ಬಿಡಲಾಗುತಿತ್ತು ಎಂಬ ಸತ್ಯವನ್ನು ಸಂದೀಪ್ ಪಾಟೀಲ್ ಒಪ್ಪಿಕೊಂಡಿದ್ದಾರೆ. ಈ ಕುರಿತು ರಾಷ್ಟ್ರೀಯಾ ಮಾಧ್ಯಮಗಳು ವರದಿ ಮಾಡಿವೆ.

ಭಾರತೀಯ ಕ್ರಿಕೆಟ್ ಟೀಮ್'ಗೆ ಸಚಿನ್ ಕೊಡುಗೆಯನ್ನು ಯಾರು ಸಹ ಮರೆಯುವಂತೆ ಇಲ್ಲ, ಎರಡು ದಶಕಗಳ ಕಾಲ ತಂಡಕ್ಕೆ ಬೆನ್ನೆಲುಬಾಗಿದ್ದ ಸಚಿನ್ ತಮ್ಮ ಜೀವನವನ್ನು ಕ್ರಿಕೆಟ್'ಗೆ ಮುಡಿಪಾಗಿ ಇಟ್ಟವರು ಎಂದರೆ ತಪ್ಪಾಗುವುದಿಲ್ಲ. 2013ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತರಾದ ತೆಂಡೂಲ್ಕರ್, 2012ರಲ್ಲಿ ಏಕದಿನ ಕ್ರಿಕೆಟ್ ನಿಂದ ನಿವೃತ್ತಿರಾಗಿದ್ದರು.

ಆದರೆ ಸಚಿನ್ ಏಕದಿನ ನಿವೃತ್ತಿ ಘೋಷಿಸದೆ ಹೋಗಿದ್ದರೆ ಅವರನ್ನು ತಂಡದಿಂದ ಕೈ ಬಿಡಲಾಗುತಿತ್ತು. ಈ ವಿಷಯ ತಿಳಿದ ಸಚಿನ್ ಸ್ವತಃ ತಾವೇ ನಿವೃತ್ತಿ ಘೊಷಿಸಿದರು ಎಂದು ಆಯ್ಕೆ ಸಮಿತಿಯ ಚಿಫ್ ಸೆಲೆಕ್ಟರ್ ಸಂದೀಪ್ ಪಾಟೀಲ್ ಸತ್ಯ ಹೊರ ಹಾಕಿದ್ದಾರೆ. 

ಸಚಿನ್ ನಿವೃತ್ತಿ ಕುರಿತು ಮಾತನಾಡಿರುವ ಸಂದೀಪ್ ಪಾಟೀಲ್, ಡಿಸೆಂಬರ್ 12 ರಂದು ನಾಗ್ಪುರದಲ್ಲಿ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ನಡೆಯುತ್ತಿದ್ದ ವೇಳೆ ಟೀಮ್ ಇಂಡಿಯಾ ಆಯ್ಕೆ ಸಮಿತಿ ಸಚಿನ್ ಅವರನ್ನು ಭೇಟಿ ಮಾಡಿ ಅವರ ಭವಿಷ್ಯದ ಪ್ಲಾನ್ ಗಳ ಕುರಿತು ಮಾತನಾಡಿದ ವೇಳೆ ಸಚಿನ್ ತಮ್ಮ ನಿವೃತ್ತಿಯ ಬಗ್ಗೆ ಯಾವುದೇ ಯೋಜನೆ ಮಾಡಿರಲಿಲ್ಲ, ಇನ್ನು ಹಲವು ದಿನ ಕ್ರಿಕೆಟ್ ಆಡುವ ಬಯಕೆ ವ್ಯಕ್ತಪಡಿಸಿದ್ದರು ಎಂದಿದ್ದಾರೆ. 

ಈ ಕುರಿತಂತೆ ಆಯ್ಕೆ ಸಮಿತಿ ಮತ್ತು ಬಿಸಿಸಿಐ ಮಾತುಕತೆ ನಡೆಸಿ, ಮುಂದಿನ ಏಕದಿನ ಪಂದ್ಯಗಳಿಂದ ಸಚಿನ್ ಅವರನ್ನು ತಂಡದಿಂದ ಹೊರ ಇಡಬೇಕು ಎನ್ನುವ ಆಯೋಚನೆಯಲ್ಲಿದ್ದ ಸಂದರ್ಭದಲ್ಲೇ ಸತ್ಯ ಸಂಗತಿ ಅರಿತ ಸಚಿನ್ ನಿವೃತ್ತಿ ಘೊಷಿಸಿದರು ಎಂದು ಪಾಟೀಲ್ ಹೇಳಿದ್ದಾರೆ. 'ಟೆಸ್ಟ್ ಪಂದ್ಯಗಳ ಕಡೆ ಹೆಚ್ಚಿನ ಗಮನ ಹರಿಸುವ ಸಲುವಾಗಿ ಸಚಿನ್ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ ಎಂದು ನಂತರ ಹೇಳಲಾಯಿತು' ಎಂದು ತಿಳಿಸಿದ್ದಾರೆ.