ಎರಡು ವರ್ಷಗಳ ಹಿಂದಷ್ಟೇ ಸಾರಾ ಬಾಲಿವುಡ್‌'ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿತ್ತು.

ಮುಂಬೈ(ಏ.08): ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಬಾಲಿವುಡ್ ನಟ ರಣವೀರ್ ಸಿಂಗ್ ಜತೆಗೆ ಇತ್ತೀಚೆಗೆ ಹೆಚ್ಚೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನಟಿ ಹಾಗೂ ರೂಪದರ್ಶಿ ದೀಪಿಕಾ ಪಡುಕೋಣೆಯ ಮಾಜಿ ಪ್ರಿಯಕರನೊಂದಿಗೆ ಸಾರಾ ಇರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡು ಅದೀಗ ವೈರಲ್ ಆಗಿದೆ.

ಎರಡು ವರ್ಷಗಳ ಹಿಂದಷ್ಟೇ ಸಾರಾ ಬಾಲಿವುಡ್‌'ಗೆ ಪಾದಾರ್ಪಣೆ ಮಾಡಲಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿತ್ತು. ಆದರೆ, ಸ್ವತಃ ಇದನ್ನು ಸಚಿನ್ ತೆಂಡೂಲ್ಕರ್ ಅಲ್ಲಗಳೆದಿದ್ದರಲ್ಲದೆ, ಸುಳ್ಳು ಸುದ್ದಿಗಳನ್ನು ಬಿತ್ತರಿಸದಂತೆ ಮಾಧ್ಯಮಕ್ಕೆ ತಿಳಿ ಹೇಳಿದ್ದರು.