ನಾನು 10 ವರ್ಷದವನಾಗಿದ್ದಾಗ ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್(1983) ಗೆದ್ದಿತು. ಅಲ್ಲಿಂದಲೇ ನನ್ನ ಕನಸು ಆರಂಭವಾಯಿತು. ನಾನು ಒಂದುದಿನ ಆ ವಿಶ್ವಕಪ್ ಗೆಲ್ಲಬೇಕು" ಎಂದು ಹಳೆಯ ನೆನಪೊಂದನ್ನು ಸಚಿನ್ ಮೆಲುಕು ಹಾಕಿದರು.
ಮುಂಬೈ(ಏ.13): ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ ಜೀವನಾಧಾರಿತ ಚಿತ್ರ ಸಚಿನ್: ಎ ಬಿಲಿಯನ್ ಡ್ರೀಮ್ಸ್ ಚಿತ್ರ ಮೇ.26ರಂದು ತೆರೆಗೆ ಅಪ್ಪಳಿಸಲಿದ್ದು ಇಂದು ಟ್ರೇಲರ್ ಬಿಡುಗಡೆಯಾಗಿದೆ.
1992ರಲ್ಲಿ ನಾನು ಮೊದಲ ಪ್ರೆಸ್ ಮೀಟ್'ನಲ್ಲಿ ಪಾಲ್ಗೊಂಡಾಗ ಸಾಕಷ್ಟು ನರ್ವಸ್ ಆಗಿದ್ದೆ. ಯಾಕೆಂದರೆ ಪ್ರೆಸ್ ಮೀಟ್ ಹೇಗಿರುತ್ತೆ? ಪತ್ರಕರ್ತರು ಯಾವ ರೀತಿ ಪ್ರಶ್ನೆಗಳನ್ನು ಕೇಳುತ್ತಾರೆ ಎಂದೆಲ್ಲಾ ಸಾಕಷ್ಟು ತಲೆಕೆಡಿಸಿಕೊಂಡಿದ್ದೆ ಎಂದು ಟ್ರೇಲರ್ ಬಿಡುಗಡೆ ನಂತರ ಮಾಸ್ಟರ್ ಬ್ಲಾಸ್ಟರ್ ತಮ್ಮ ಅನುಭವವನ್ನು ಹಂಚಿಕೊಂಡರು.
ತಮ್ಮ ಚಿತ್ರದ ಬಗ್ಗೆ ಮಾತನಾಡಿದ ಮುಂಬೈಕರ್, "ಈ ಸಿನಿಮಾ ಕೇವಲ ನನ್ನ ಕ್ರಿಕೆಟ್ ಪಯಣವನ್ನು ಮಾತ್ರೊಳಗೊಂಡಿಲ್ಲ. ಇದರ ಜೊತೆಗೆ ನನ್ನ ಜೀವನದ ಹಲವು ಘಟನೆಗಳನ್ನು ನೀವಲ್ಲಿ ಕಾಣುತ್ತೀರ. ನಾನು ಕ್ರಿಕೆಟ್'ನಲ್ಲಿ ಭಾರತವನ್ನು ಪ್ರತಿನಿಧಿಸಬೇಕು ಎಂದು ಕನಸುಕಂಡಿದ್ದೆ" ಎಂದರು.
ನಾನು 10 ವರ್ಷದವನಾಗಿದ್ದಾಗ ಟೀಂ ಇಂಡಿಯಾ ಚೊಚ್ಚಲ ವಿಶ್ವಕಪ್(1983) ಗೆದ್ದಿತು. ಅಲ್ಲಿಂದಲೇ ನನ್ನ ಕನಸು ಆರಂಭವಾಯಿತು. ನಾನು ಒಂದುದಿನ ಆ ವಿಶ್ವಕಪ್ ಗೆಲ್ಲಬೇಕು" ಎಂದು ಹಳೆಯ ನೆನಪೊಂದನ್ನು ಸಚಿನ್ ಮೆಲುಕು ಹಾಕಿದರು.
ಹೀಗಿದೆ ಸಚಿನ್: ಎ ಬಿಲಿಯನ್ ಡ್ರೀಮ್ಸ್ ಚಿತ್ರದ ಟ್ರೈಲರ್... ನೀವೊಮ್ಮೆ ನೋಡಿ ಎಂಜಾಯ್ ಮಾಡಿ