ಬೆಂಗಳೂರಿನ ಬೈಕ್ ಸವಾರರೊಬ್ಬರು ಸಹ ಸವಾರರೊಂದಿಗೆ ಹೆಲ್ಮೆಟ್ ಧರಿಸಿ ಪ್ರಯಾಣಿಸುತ್ತಿರುವ ಚಿತ್ರವೊಂದನ್ನು ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣವಾದ ಟ್ವಿಟರ್'ನಲ್ಲಿ ಪೋಸ್ಟ್ ಮಾಡಿದ್ದು, 'ದಿ ಪವರ್ ಆಫ್ ಟು! ಗ್ರೇಟ್ ಗೋಯಿಂಗ್, ಬೆಂಗಳೂರು' ಎಂದು ಕೊಂಡಾಡಿದ್ದಾರೆ.
ಬೆಂಗಳೂರು(ನ.04): ಕೆಲದಿನಗಳ ಹಿಂದಷ್ಟೇ ಬೈಕ್ ಸವಾರರಿಗೆ ಹೆಲ್ಮೆಟ್ ಬಳಕೆ, ರಸ್ತೆ ಸುರಕ್ಷತೆ ಕುರಿತು ತಿಳಿ ಹೇಳಿದ್ದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಇದೀಗ ಬೆಂಗಳೂರು ಬೈಕ್ ಸವಾರನನ್ನು ಕೊಂಡಾಡಿದ್ದಾರೆ.
ಹೌದು, ಬೆಂಗಳೂರಿನ ಬೈಕ್ ಸವಾರರೊಬ್ಬರು ಸಹ ಸವಾರರೊಂದಿಗೆ ಹೆಲ್ಮೆಟ್ ಧರಿಸಿ ಪ್ರಯಾಣಿಸುತ್ತಿರುವ ಚಿತ್ರವೊಂದನ್ನು ಸಚಿನ್ ತೆಂಡೂಲ್ಕರ್ ಸಾಮಾಜಿಕ ಜಾಲತಾಣವಾದ ಟ್ವಿಟರ್'ನಲ್ಲಿ ಪೋಸ್ಟ್ ಮಾಡಿದ್ದು, 'ದಿ ಪವರ್ ಆಫ್ ಟು! ಗ್ರೇಟ್ ಗೋಯಿಂಗ್, ಬೆಂಗಳೂರು' ಎಂದು ಕೊಂಡಾಡಿದ್ದಾರೆ.
ರಸ್ತೆ ಸುರಕ್ಷತೆಯ ಬಗ್ಗೆ ಪೊಲೀಸರು, ಸರ್ಕಾರ ವಾಹನ ಸವಾರರಲ್ಲಿ ಸಾಕಷ್ಟು ಅರಿವನ್ನು ಮೂಡಿಸುತ್ತಿದ್ದರೂ, ಹಲವು ಸಂದರ್ಭದಲ್ಲಿ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿ ಜನರು ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಈ ನಡುವೆ ದೇಶದ ಸೆಲಿಬ್ರಿಟಿಗಳೂ ರಸ್ತೆ ಸುರಕ್ಷತಾ ನಿಯಮದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಮೂಲಕ ಅಪಾರ ಜೀವಹಾನಿಯನ್ನು ತಡೆಯಬಹುದು.
ಸ್ವತಃ ಸಚಿನ್ ತೆಂಡೂಲ್ಕರ್ ಸೀಟ್ ಬೆಲ್ಟ್ ಧರಿಸಿರುವ ಚಿತ್ರವನ್ನೂ ಟ್ವಿಟರ್'ನಲ್ಲಿ ಹಂಚಿಕೊಂಡಿದ್ದು, ಇತರ ವಾಹನ ಸವಾರರಿಗೂ ಮಾದರಿಯಾಗಿದ್ದಾರೆ.
