ರಷ್ಯಾದ ಸೆಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಸಚಿನ್ 5-0 ಅಂಕಗಳಿಂದ ಕ್ಯೂಬಾದ ಜಾರ್ಜ್ ಗ್ರಿನಾನ್ ಎದುರು ಗೆಲುವು ಪಡೆದರು.
ನವದೆಹಲಿ(ನ.26): ಭಾರತದ ಯುವ ಬಾಕ್ಸರ್ ಸಚಿನ್ ಸಿಂಗ್, ಎಐಬಿಎ ಯುವ ವಿಶ್ವ ಬಾಕ್ಸಿಂಗ್ ಚಾಂಪಿಯನ್'ಶಿಪ್ನ ಪುರುಷರ 49 ಕೆ.ಜಿ. ವಿಭಾಗದ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.
ರಷ್ಯಾದ ಸೆಂಟ್ ಪೀಟರ್ಸ್ಬರ್ಗ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ಸಚಿನ್ 5-0 ಅಂಕಗಳಿಂದ ಕ್ಯೂಬಾದ ಜಾರ್ಜ್ ಗ್ರಿನಾನ್ ಎದುರು ಗೆಲುವು ಪಡೆದರು.
‘‘ಕ್ಯೂಬಾದ ರಾಷ್ಟ್ರೀಯ ಚಾಂಪಿಯನ್ ಎನಿಸಿದ್ದ ಗ್ರಿನಾನ್ ಎದುರು ಟೂರ್ನಿಯ ಆರಂಭದಲ್ಲಿ ಭಾರತದ ಕೆಲ ಬಾಕ್ಸರ್ಗಳು ಸೋಲು ಕಂಡಿದ್ದರು. ಹೀಗಾಗಿ ಅವರ ವಿರುದ್ಧ ಆಕ್ರಮಣಕಾರಿ ಪ್ರದರ್ಶನಕ್ಕೆ ನಿಶ್ಚಯಿಸಿದ್ದೆ. ಕೊನೆಗೂ ಅವರನ್ನು ಮಣಿಸಿದ್ದು ತೃಪ್ತಿ ತಂದಿದೆ’’ ಎಂದು ಸಚಿನ್ ಸಿಂಗ್ ಸ್ಪರ್ಧೆಯ ಬಳಿಕ ತಿಳಿಸಿದರು.
