ಈ ತಿಂಗಳ ಆರಂಭದಲ್ಲಿ ಸಚಿನ್ ತೆಂಡೂಲ್ಕರ್, ಭಾರತೀಯ ಸೇನಾಪಡೆಯ ಯೋಧರಿಗೆ ಸಿನಿಮಾ ವೀಕ್ಷಿಸಲು ವಿಶೇಷವಾದ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿದ್ದರು.  

ಮುಂಬೈ(ಮೇ.24): ಟೀಂ ಇಂಡಿಯಾದ ಆಟಗಾರರಿಂದು ಭಾರತದ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡುಲ್ಕರ್‌ ಅವರ ಜೀವನಾಧಾರಿತ ‘ಸಚಿನ್‌ ಎ ಬಿಲಿಯನ್‌ ಡ್ರೀಮ್ಸ್‌' ಚಿತ್ರವನ್ನು ವೀಕ್ಷಿಸಿದರು.

ಇಲ್ಲಿನ ವರ್ಸೋವಾದಲ್ಲಿನ ಚಿತ್ರ ಮಂದಿರ ಒಂದರಲ್ಲಿ ಚಿತ್ರ ವೀಕ್ಷಣೆಗಾಗಿ ಭಾರತ ತಂಡದ ಆಟಗಾರರಿಗೆ ವಿಶೇಷವಾದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು ಎಂದು ಚಿತ್ರದ ನಿರ್ಮಾಪಕ ರವಿ ಭಾಗಚಂದ್‌'ಕಾ ಹೇಳಿದ್ದಾರೆ. ಭಾರತ ತಂಡದ ಆಟಗಾರರೊಂದಿಗೆ ತೆಂಡುಲ್ಕರ್‌ ಕೂಡ ಚಿತ್ರ ವೀಕ್ಷಣೆ ಮಾಡಿದ್ದಾರೆ.

ಈ ತಿಂಗಳ ಆರಂಭದಲ್ಲಿ ಸಚಿನ್ ತೆಂಡೂಲ್ಕರ್, ಭಾರತೀಯ ಸೇನಾಪಡೆಯ ಯೋಧರಿಗೆ ಸಿನಿಮಾ ವೀಕ್ಷಿಸಲು ವಿಶೇಷವಾದ ಸ್ಕ್ರೀನಿಂಗ್ ವ್ಯವಸ್ಥೆ ಮಾಡಿದ್ದರು.

ಇದೇ 26 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಸಚಿನ್‌ ಚಿತ್ರ ತೆರೆಕಾಣಲಿದೆ. ಈಗಾಗಲೇ ಕೇರಳ, ಮಹಾರಾಷ್ಟ್ರ ಮತ್ತು ಛತ್ತಿಸ್‌'ಗಡ ರಾಜ್ಯಗಳಲ್ಲಿ ಚಿತ್ರ ಪ್ರದರ್ಶನಕ್ಕೆ ತೆರಿಗೆ ವಿನಾಯಿತಿ ನೀಡಲಾಗಿದೆ.