ಭಾರತ ಪರ ಶಮಿ 4 ವಿಕೆಟ್ ಪಡೆದರೆ, ಬುಮ್ರಾ 3, ಇಶಾಂತ್ ಶರ್ಮಾ 2 ಹಾಗೂ ಅಶ್ವಿನ್ 1 ವಿಕೆಟ್ ಪಡೆದರು.

ಸೆಂಚೂರಿಯನ್(ಜ.16): ಮೊಹಮ್ಮದ್ ಶಮಿ ಹಾಗೂ ಇಶಾಂತ್ ಶರ್ಮಾ ಮೊನಚಾದ ಬೌಲಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾವನ್ನು 258 ರನ್'ಗಳಿಗೆ ಕಟ್ಟಿ ಹಾಕಿದ ಟೀಂ ಇಂಡಿಯಾ ಎರಡನೇ ಟೆಸ್ಟ್ ಗೆಲ್ಲಲು 287 ರನ್'ಗಳ ಗುರಿ ಸಿಕ್ಕಿದೆ.

ನಾಲ್ಕನೇ ದಿನದ ಆರಂಭದಲ್ಲೇ ದಕ್ಷಿಣ ಆಫ್ರಿಕಾ ಕ್ವಿಂಟನ್ ಡಿ ಕಾಕ್ ವಿಕೆಟ್ ಕಳೆದುಕೊಂಡಿತು. ಆನಂತರ ಡು ಪ್ಲೆಸಿಸ್ ಹಾಗೂ ಫಿಲಂಡರ್ ಎಚ್ಚರಿಕೆಯ ಆಟಕ್ಕೆ ಮುಂದಾದರು. ಈ ಜೋಡಿ 6ನೇ ವಿಕೆಟ್'ಗೆ 46 ರನ್ ಜತೆಯಾಟವಾಡಿದರು. ಈ ಜೋಡಿಯನ್ನು ಇಶಾಂತ್ ಶರ್ಮಾ ಬೇರ್ಪಡಿಸಿದರು. ಫಿಲಾಂಡರ್(85 ಎಸೆತಗಳಲ್ಲಿ 26 ರನ್) ವಿಜಯ್'ಗೆ ಕ್ಯಾಚಿತ್ತು ನಿರ್ಗಮಿಸಿದರು. ಇನ್ನು ಡು ಪ್ಲೆಸಿಸ್(48 ರನ್, 141 ಎಸೆತ) ಅವರಿಗೆ ಬುಮ್ರಾ ಪೆವಿಲಿಯನ್ ಹಾದಿ ತೋರಿಸಿದರು. ಡು ಪ್ಲೆಸಿಸ್ ವಿಕೆಟ್ ಉರುತ್ತಿದ್ದಂತೆ ಬಾಲಂಗೋಚಿಗಳು ಕೂಡಾ ಅವರನ್ನೇ ಹಿಂಬಾಲಿಸಿದರು.

ಇದೀಗ ಭಾರತಕ್ಕೆ 287 ರನ್'ಗಳ ಗುರಿ ಸಿಕ್ಕಿದ್ದು, ಎಚ್ಚರಿಕೆ ಆಟವಾಡಿದರೆ ಪಂದ್ಯವನ್ನು ಗೆಲ್ಲುವ ಸಾಧ್ಯತೆಯಿದೆ

ಭಾರತ ಪರ ಶಮಿ 4 ವಿಕೆಟ್ ಪಡೆದರೆ, ಬುಮ್ರಾ 3, ಇಶಾಂತ್ ಶರ್ಮಾ 2 ಹಾಗೂ ಅಶ್ವಿನ್ 1 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರ್:

ದಕ್ಷಿಣ ಆಫ್ರಿಕಾ: 335&258

ಎಬಿ ಡಿವಿಲಿಯರ್ಸ್: 80

ಶಮಿ: 49/4

ಭಾರತ:307/10

ವಿರಾಟ್ ಕೊಹ್ಲಿ: 153

ಮಾರ್ಕೆಲ್: 60/4

(* ವಿವರ ಅಪೂರ್ಣ)