ಕೊಚ್ಚಿ(ಜು.21): ಬಿಸಿಸಿಐನಿಂದ ನಿಷೇಧಕ್ಕೊಳಗಾಗಿರುವ ಟೀಂ ಇಂಡಿಯಾ ವೇಗಿ ಎಸ್ ಶ್ರೀಶಾಂತ್ ಇದೀಗ ಸಿನಿಮಾ ಕ್ಷೇತ್ರದಲ್ಲೇ ಗಟ್ಟಿಯಾಗಿ ನೆಲೆಯೂರಲು ರೆಡಿಯಾಗಿದ್ದಾರೆ. ಇತ್ತೀಚೆಗೆ ಶ್ರೀಶಾಂತ್ ಕಟ್ಟು ಮಸ್ತಾದ ದೇಹ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿತ್ತು. 

ಸಿನಿಮಾ ಕ್ಷೇತ್ರವನ್ನ ವೃತ್ತಿಯಾಗಿ ಸ್ವೀಕರಿಸಿರುವ ಶ್ರೀಶಾಂತ್ ಇದೀಗ ನೂತನ ವೀಡಿಯೋ ರಿಲೀಸ್ ಮಾಡಿದ್ದಾರೆ. ಶ್ರೀಶಾಂತ್ ಜಿಮ್ ಸೆಶನ್ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. 

 

 

💪🏻✌🏻😎👍🏻#hardwork #dedication #determination #discipline ..#@lifestyle

A post shared by Sree Santh (@sreesanthnair36) on Jul 20, 2018 at 1:36pm PDT

;

 

ಶ್ರೀಶಾಂತ್ ಕಟ್ಟು ಮಸ್ತು ದೇಹದ ವೀಡಿಯೋ ಯಾವುದೇ ಬಾಲಿವುಡ್ ಹಾಗೂ ಹಾಲಿವುಡ್ ನಟರಿಗೂ ಕಡಿಮೆ ಇಲ್ಲ. ಸದ್ಯ ದಕ್ಷಿಣ ಭಾರತದ ಯಾವುದೇ ಸಿನಿಮಾ ನಟರು ಶ್ರೀಶಾಂತ್ ರೀತಿ ಬಾಡಿ ಬಿಲ್ಡ್ ಮಾಡಿಲ್ಲ. ಅಷ್ಟರ ಮಟ್ಟಿಗೆ ಶ್ರೀಶಾಂತ್ ಎಲ್ಲರನ್ನ ಮೋಡಿ ಮಾಡಿದ್ದಾರೆ.

ಇದನ್ನು ಓದಿ: ಕ್ರಿಕೆಟಿಗ ಎಸ್ ಶ್ರೀಶಾಂತ್ ಈಗ ಹೇಗಾಗಿದ್ದಾರೆ ಗೊತ್ತಾ?