Asianet Suvarna News Asianet Suvarna News

ಬಿಸಿಸಿಐಗೆ ತಿರುಗೇಟು ನೀಡಿದ ಶ್ರೀಶಾಂತ್

ಏಷ್ಯಾನೆಟ್ ನ್ಯೂಸ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶ್ರೀಶಾಂತ್, ಬಿಸಿಸಿಐ ನನ್ನ ಮೇಲೆ ನಿಷೇಧ ಹೇರಿದೆಯೇ ಹೊರತು, ಐಸಿಸಿ ನನ್ನ ಮೇಲೆ ನಿಷೇಧ ಹೇರಿಲ್ಲ. ಅಲ್ಲದೇ ನನಗೆ ಬಿಸಿಸಿಐ ಭಾರತದಲ್ಲಿ ಆಡಲು ನಿಷೇಧ ಹೇರಿದೆ. ಖಾಸಗಿ ಸಂಸ್ಥೆಯಾದ ಬಿಸಿಸಿಐ ನಿಷೇಧ ಹೇರಿದ ಮಾತ್ರಕ್ಕೆ ನಾನು ವಿದೇಶದಲ್ಲಿ ಆಡಬಾರದು ಎಂದೇನಿಲ್ಲವಲ್ಲ ಎಂದು ಹೇಳಿದ್ದಾರೆ.

S Sreesanth launches another attack on private BCCI says open to play for any other country

ನವದೆಹಲಿ(ಅ.20): ಬಿಸಿಸಿಐನಿಂದ ಪದೇಪದೇ ನಿರ್ಲಕ್ಷ್ಯಕ್ಕೊಳಗಾಗುತ್ತಿರುವ ಕೇರಳ ವೇಗಿ ಶ್ರೀಶಾಂತ್ ಇದೀಗ ಶ್ರೀಮಂತ ಕ್ರಿಕೆಟ್ ಸಂಸ್ಥೆಗೆ ಪ್ರಬಲ ತಿರುಗೇಟು ನೀಡಲು ಮುಂದಾಗಿದ್ದಾರೆ.

ಹೌದು, 2013ರ ಐಪಿಎಲ್'ನಲ್ಲಿ ಸ್ಪಾಟ್ ಫಿಕ್ಸಿಂಗ್ ಆರೋಪಕ್ಕೆ ಗುರಿಯಾಗಿ ಬಿಸಿಸಿಐನಿಂದ ಅಜೀವ ನಿಷೇಧಕ್ಕೊಳಗಾಗಿರುವ ಶ್ರೀಶಾಂತ್ ಮೇಲಿನ ನಿಷೇಧ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಎತ್ತಿಹಿಡಿದಿತ್ತು. ಇದರ ಬೆನ್ನಲ್ಲೇ ಬೇರೆ ದೇಶವನ್ನು ಪ್ರತಿನಿಧಿಸುವ ಮನಸು ಮಾಡಿರುವುದಾಗಿ ಶ್ರೀಶಾಂತ್ ಹೇಳಿದ್ದಾರೆ.

ಏಷ್ಯಾನೆಟ್ ನ್ಯೂಸ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಶ್ರೀಶಾಂತ್, ಬಿಸಿಸಿಐ ನನ್ನ ಮೇಲೆ ನಿಷೇಧ ಹೇರಿದೆಯೇ ಹೊರತು, ಐಸಿಸಿ ನನ್ನ ಮೇಲೆ ನಿಷೇಧ ಹೇರಿಲ್ಲ. ಅಲ್ಲದೇ ನನಗೆ ಬಿಸಿಸಿಐ ಭಾರತದಲ್ಲಿ ಆಡಲು ನಿಷೇಧ ಹೇರಿದೆ. ಖಾಸಗಿ ಸಂಸ್ಥೆಯಾದ ಬಿಸಿಸಿಐ ನಿಷೇಧ ಹೇರಿದ ಮಾತ್ರಕ್ಕೆ ನಾನು ವಿದೇಶದಲ್ಲಿ ಆಡಬಾರದು ಎಂದೇನಿಲ್ಲವಲ್ಲ ಎಂದು ಹೇಳಿದ್ದಾರೆ.

ನನಗಿನ್ನು 34 ವರ್ಷ, ಇನ್ನೂ 6 ವರ್ಷ ಕ್ರಿಕೆಟ್ ಆಡುವ ಸಾಮರ್ಥ್ಯ ನನಗಿದೆ. ಹಾಗಾಗಿ ನಾನು ಬೇರೆ ದೇಶವನ್ನು ಪ್ರತಿನಿಧಿಸುವ ಯೋಚನೆಯಲ್ಲಿದ್ದೇನೆ ಎಂದು ಎರಡು ವಿಶ್ವಕಪ್(1ಟಿ20 ಹಾಗೂ 1 ಏಕದಿನ) ವಿಜೇತ ತಂಡದ ಸದಸ್ಯ ಶ್ರೀಶಾಂತ್ ಹೇಳಿದ್ದಾರೆ.   

ಇದೇ ವರ್ಷ ಸಪ್ಟಂಬರ್ 18 ರಂದು ಕೇರಳ ಹೈಕೋರ್ಟ್​ನ ಏಕ ಸದಸ್ಯ ಪೀಠ ಶ್ರೀಶಾಂತ್'​​​ರ ನಿಷೇಧವನ್ನ ತೆರವು ಗೊಳಿಸುವಂತೆ ಆದೇಶಿಸಿತ್ತು. ಆದರೆ ಬಿಸಿಸಿಐ ಕಳೆದ ತಿಂಗಳು ಕೇರಳದ ದ್ವಿಸದಸ್ಯ ಪೀಟಕ್ಕೆ ಮೇಲ್ಮನವಿ ಸಲ್ಲಿಸಿತ್ತು. ನಂತರ ದ್ವಿಸದಸ್ಯ ಪೀಠ ಮಂಗಳವಾರವಷ್ಟೇ ಬಿಸಿಸಿಐ ನಿರ್ಧಾರವನ್ನ ಎತ್ತಿಹಿಡಿದು ಶ್ರೀಶಾಂತ್ ಮೇಲಿನ ನಿಷೇಧವನ್ನ ಮುಂದುವರಿಸುವಂತೆ ಆದೇಶಿಸಿತ್ತು.

Follow Us:
Download App:
  • android
  • ios