ದ್ರಾವಿಡ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರಂತೆ ಶ್ರೀಶಾಂತ್!
2013ರಲ್ಲಿ ಅಪ್ಟನ್ ರಾಯಲ್ಸ್ ತಂಡದ ಕೋಚ್ ಆಗಿದ್ದರು. ಆ ವೇಳೆ ದ್ರಾವಿಡ್ ತಂಡದ ನಾಯಕರಾಗಿದ್ದರು. ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಂಧನಕ್ಕೊಳಗಾಗುವ ಮುನ್ನ ಅವರನ್ನು ಪಂದ್ಯದಿಂದ ಕೈಬಿಡಲಾಗಿತ್ತು. ಇದಕ್ಕೂ ಮುನ್ನ ನಡೆದ ಘಟನೆಯೊಂದು ಇದೀಗ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
ನವದೆಹಲಿ[ಮೇ.04]: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ವಿರುದ್ಧ ವಿವಾದಾತ್ಮಕ ಕ್ರಿಕೆಟಿಗ ಶ್ರೀಶಾಂತ್ ಅವಾಚ್ಯ ಶಬ್ಧಗಳ ಬಳಕೆ ಮಾಡಿದ್ದರು ಎಂದು ರಾಜಸ್ಥಾನ ರಾಯಲ್ಸ್‌ನ ಕೋಚ್ ಪ್ಯಾಡಿ ಅಪ್ಟನ್ ಇತ್ತೀಚೆಗೆ ಬಿಡುಗಡೆಗೊಂಡ ತಮ್ಮ ಪುಸ್ತಕ ‘ದ ಬೇರ್’ಫೂಟ್ ಕೋಚ್’ನಲ್ಲಿ ಬರೆದಿದ್ದಾರೆ.
ಶ್ರೀಶಾಂತ್ ಮೇಲಿನ ಅಜೀವ ನಿಷೇಧ ರದ್ದು ಮಾಡಿದ ಸುಪ್ರೀಂ ಕೋರ್ಟ್
2013ರಲ್ಲಿ ಅಪ್ಟನ್ ರಾಯಲ್ಸ್ ತಂಡದ ಕೋಚ್ ಆಗಿದ್ದರು. ಆ ವೇಳೆ ದ್ರಾವಿಡ್ ತಂಡದ ನಾಯಕರಾಗಿದ್ದರು. ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ಆರೋಪದಡಿ ಬಂಧನಕ್ಕೊಳಗಾಗುವ ಮುನ್ನ ಅವರನ್ನು ಪಂದ್ಯದಿಂದ ಕೈಬಿಡಲಾಗಿತ್ತು. ಇದರಿಂದ ಸಿಟ್ಟಾದ ಶ್ರೀಶಾಂತ್, ದ್ರಾವಿಡ್ ಹಾಗೂ ನನ್ನನ್ನು ನಿಂದಿಸಿದರು ಎಂದು ಅಪ್ಟನ್ ಬರೆದಿದ್ದಾರೆ. ಮೇ 16, 2013ರಂದು ಶ್ರೀಶಾಂತ್ ಬಂಧನಕ್ಕೊಳಗಾದರು. ಅದಕ್ಕೆ 24 ಗಂಟೆಗಳ ಮೊದಲು ಅಸಭ್ಯ ವರ್ತನೆ ಕಾರಣ ಅವರನ್ನು ತಂಡದಿಂದ ಹೊರಹಾಕಲಾಗಿತ್ತು ಎಂದು ಅಪ್ಟನ್ ತಿಳಿಸಿದ್ದಾರೆ.
‘ಪಂದ್ಯದಲ್ಲಿ ಆಡದ ಆಟಗಾರರಿಗೆ ನಿಮಗೆ ಸ್ಥಾನ ಸಿಕ್ಕಿಲ್ಲ ಎಂದು ಮುಂಚಿತವಾಗಿಯೇ ತಿಳಿಸುವುದು ಸಂಪ್ರದಾಯ. ಅದರಂತೆ ಶ್ರೀಶಾಂತ್‌ಗೂ ಹೇಳಿದೆವು. ಆದರೆ ಅವರು ಅವಾಚ್ಯ ಶಬ್ಧಗಳಿಂದ ನನ್ನನ್ನು ಹಾಗೂ ದ್ರಾವಿಡ್‌ರನ್ನು ನಿಂದಿಸಿದರು. ಪಂದ್ಯದಲ್ಲಿ ಆಡುತ್ತಿಲ್ಲ ಎಂದಿದ್ದಕ್ಕೆ ಅವರಿಗೇಕೆ ಅಷ್ಟೊಂದು ಸಿಟ್ಟು ಬಂದಿತು ಎಂದು ಬಳಿಕ ತಿಳಿಯಿತು’ ಎಂದು ಅಪ್ಟನ್ ಬರೆದಿದ್ದಾರೆ.
ಅಪ್ಟನ್ ಸುಳ್ಳುಗಾರ: ಪ್ಯಾಡಿ ಅಪ್ಟನ್ ಆರೋಪಗಳಿಗೆ ಉತ್ತರಿಸಿರುವ ಶ್ರೀಶಾಂತ್, ‘ಅವರೊಬ್ಬ ಸುಳ್ಳುಗಾರ. ನಾನು ಎಂದಿಗೂ ಸಹ ಆಟಗಾರರೊಂದಿಗೆ ಕೆಟ್ಟದಾಗಿ ವರ್ತಿಸಿಲ್ಲ’ ಎಂದು ಆರೋಪ ತಳ್ಳಿಹಾಕಿದ್ದಾರೆ.