ತಮ್ಮ ನೆಚ್ಚಿನ ಕ್ರಿಕೆಟ್ ಕಲಿಗಳನ್ನು ನೋಡಲು ದೂರದ ಊರುಗಳಿಂದ ರಾಜ್‌ಕೋಟ್‌ಗೆ ದೌಡಾಯಿಸಿದ್ದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ತಮ್ಮಲ್ಲಿನ 500, 1000 ನೋಟುಗಳು ಚಲಾವಣೆಯಾಗದೆ, ಚಿಲ್ಲರೆಗಾಗಿ ಪರದಾಡಿದರು
ರಾಜ್'ಕೋಟ್(ನ.09): ಕೇಂದ್ರ ಸರ್ಕಾರವು 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿರುವುದರ ಬಿಸಿ ಕ್ರಿಕೆಟ್ ಲೋಕಕ್ಕೂ ತಟ್ಟಿದೆ.
ಇಂದಿನಿಂದ ಆರಂಭವಾದ ಭಾರತ, ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯವನ್ನು ನೋಡಲು ಟಿಕೆಟ್ ಖರೀದಿಗಾಗಿ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕಂಧೇರಿ ಕ್ರೀಡಾಂಗಣದ ಕೌಂಟರ್ಗಳಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಕೇಂದ್ರ ಸರ್ಕಾರದ ನಿರ್ಧಾರ ತೀವ್ರ ನಿರಾಸೆ ತಂದಿತು.
ತಮ್ಮ ನೆಚ್ಚಿನ ಕ್ರಿಕೆಟ್ ಕಲಿಗಳನ್ನು ನೋಡಲು ದೂರದ ಊರುಗಳಿಂದ ರಾಜ್ಕೋಟ್ಗೆ ದೌಡಾಯಿಸಿದ್ದ ಲಕ್ಷಾಂತರ ಕ್ರಿಕೆಟ್ ಅಭಿಮಾನಿಗಳು ತಮ್ಮಲ್ಲಿನ 500, 1000 ನೋಟುಗಳು ಚಲಾವಣೆಯಾಗದೆ, ಚಿಲ್ಲರೆಗಾಗಿ ಪರದಾಡಿದರು.
ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳನ್ನು ಪರಿಪರಿಯಾಗಿ ಬೇಡಿಕೊಂಡರೂ ಅಧಿಕಾರಿಗಳು 500, 1000 ಮುಖಬೆಲೆಯ ನೋಟುಗಳನ್ನು ಸ್ವೀಕರಿಸಲು ನಿರಾಕರಿಸಿದ್ದು ಅಭಿಮಾನಿಗಳನ್ನು ನಿರಾಸೆಗೊಳಿಸಿತು.
