ಏಕಾಂಗಿ ಹೋರಾಟದಿಂದ ರಾಜಸ್ಥಾನ್ಗೆ ಗೆಲುವು ತಂದಿಟ್ಟ ಬಟ್ಲರ್

RR Won By 6 Wickets
Highlights

ಧೋನಿ ಪಡೆ ನೀಡಿದ್ದ 176 ರನ್'ಗಳ ಸವಾಲನ್ನು  ಒಂದು ಕಡೆಯಿಂದ ವಿಕೆಟ್ ಬೀಳುತ್ತಿದ್ದರೂ ಏಕಾಂಗಿಯಾಗಿ ಬೆನ್ನಟ್ಟಿದ ಆರಂಭಿಕ ಆಟಗಾರ ಬಟ್ಲರ್  ಗೆಲುವು ದೊರಕಿಸಿಕೊಟ್ಟರು. 60 ಚಂಡುಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸ್'ಗಳೊಂದಿಗೆ  ಅಜೇಯ 95 ರನ್ ಸಿಡಿಸಿದರು.  

ಜೈಪುರ[ಮೇ.11]: ಪ್ಲೇಆಫ್ ತಲುಪಬೇಕೆನ್ನುವ ಪಣ ತೊಟ್ಟಿರುವ ರಾಜಸ್ಥಾನ್ ರಾಯಲ್ಸ್ ತಂಡ ಪ್ರಬಲ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 6 ವಿಕೇಟ್'ಗಳ ರೋಚಕ ಗೆಲುವು ಸಾಧಿಸಿದೆ.
ಧೋನಿ ಪಡೆ ನೀಡಿದ್ದ 176 ರನ್'ಗಳ ಸವಾಲನ್ನು  ಒಂದು ಕಡೆಯಿಂದ ವಿಕೆಟ್ ಬೀಳುತ್ತಿದ್ದರೂ ಏಕಾಂಗಿಯಾಗಿ ಬೆನ್ನಟ್ಟಿದ ಆರಂಭಿಕ ಆಟಗಾರ ಬಟ್ಲರ್  ಗೆಲುವು ದೊರಕಿಸಿಕೊಟ್ಟರು. 60 ಚಂಡುಗಳಲ್ಲಿ 11 ಬೌಂಡರಿ ಹಾಗೂ 2 ಸಿಕ್ಸ್'ಗಳೊಂದಿಗೆ  ಅಜೇಯ 95 ರನ್ ಸಿಡಿಸಿದರು.  
ಇದಕ್ಕೂ ಮುನ್ನ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್’ಕೆ ಮೂರನೇ ಓವರ್’ನಲ್ಲಿ ಅಂಬಟಿ ರಾಯುಡು ವಿಕೆಟ್ ಕಳೆದುಕೊಂಡಿತು. ಎರಡನೇ ವಿಕೆಟ್’ಗೆ ವಾಟ್ಸನ್-ಸುರೇಶ್ ರೈನಾ ಜೋಡಿ 86 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು ನೂರರ ಗಡಿ ದಾಟಿಸಿದರು. ವಾಟ್ಸನ್[39]  ಜೋಪ್ರಾ ಆರ್ಚರ್’ಗೆ ಎರಡನೇ ಬಲಿಯಾದರು. ರೈನಾ 52 ರನ್ ಬಾರಿಸಿ ಇಶ್ ಸೋದಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ನಾಯಕ ಧೋನಿ ಚುರುಕಿನ ಬ್ಯಾಟಿಂಗ್ ನಡೆಸಿದರು. 23 ಎಸೆತಗಳಲ್ಲಿ 33 ರನ್ ಬಾರಿಸಿ ಅಜೇಯರಾಗುಳಿದರೆ, ಸ್ಯಾಮ್ ಬಿಲ್ಲಿಂಗ್ಸ್ 27 ರನ್ ಬಾರಿಸಿ ಕೊನೆಯ ಓವರ್’ನಲ್ಲಿ ರನೌಟ್ ಆದರು.
ರಾಜಸ್ಥಾನ ರಾಯಲ್ಸ್ ಪರ ಜೋಪ್ರಾ ಆರ್ಚರ್ 2 ವಿಕೆಟ್ ಪಡೆದರೆ, ಇಶ್ ಸೋದಿ ಒಂದು ವಿಕೆಟ್ ಪಡೆದರು. 
ಸಂಕ್ಷಿಪ್ತ ಸ್ಕೋರ್:

CSK: 176/4

ಸುರೇಶ್ ರೈನಾ: 52

ಜೋಪ್ರಾ ಆರ್ಚರ್: 42/2

RR
177/6 (19.5)
(ಬಟ್ಲರ್ ಅಜೇಯ 95)

ಫಲಿತಾಂಶ : ರಾಜಸ್ಥಾನ್'ಗೆ 6 ವಿಕೇಟ್ ಜಯ

loader