ಈತ ಒಟ್ಟಾರೆ 26 ಚಂಡುಗಳಲ್ಲಿ 8 ಸಿಕ್ಸ್'ರ್ ಹಾಗೂ 2 ಬೌಂಡರಿಗಳೊಂದಿಗೆ 65 ರನ್ ಚಚ್ಚಿದ್ದ. ವೇಟ್ಲಿ ಸ್ಫೋಟಕ ಬ್ಯಾಟಿಂಗ್ ನಡುವೆಯೂ ವರ್ಸೆಸ್ಟರ್ಷೈರ್ ತಂಡ 37 ರನ್'ಗಳಿಂದ ಸೋಲನ್ನು ಅನುಭವಿಸಿತು. ಯಾರ್ಕ್ಷೈರ್ ಒಡ್ಡಿದ 233 ರನ್'ಗಳ ಸವಾಲಿಗೆ ವರ್ಸೆಸ್ಟರ್ಷೈರ್ 20 ಓವರ್'ಗಳಿಗೆ 196 ರನ್ ಗಳಿಸಲಷ್ಟೆ ಶಕ್ತವಾಯಿತು.
ನವದೆಹಲಿ(ಜು.24): ಚುಟುಕು ಕ್ರಿಕೆಟ್ ಟಿ20ಯಲ್ಲಿ ಭಾರತದ ಬ್ಯಾಟ್ಸ್'ಮೆನ್ ಯುವರಾಜ್ ಸಿಂಗ್ ನಂತರ ಮತ್ತೊಬ್ಬ ದಾಂಡಿಗ 6 ಚಂಡುಗಳಲ್ಲಿ 6 ಸಿಕ್ಸ್'ರ್ ಹೊಡೆದು ದಾಖಲೆ ನಿರ್ಮಿಸಿದ್ದಾನೆ.
ಇಂಗ್ಲೆಂಡ್ ಕೌಂಟಿ ನ್ಯಾಟ್ವೆಸ್ಟ್ ಟಿ20ಯ ಸರಣಿಯಲ್ಲಿ ವರ್ಸೆಸ್ಟರ್ಷೈರ್ ಪರ ಆಡಿದ 28 ವರ್ಷದ ರಾಸ್ ವೈಟ್ಲೀ, ಯಾರ್ಕ್ಷೈರ್ ತಂಡದ ಬೌಲರ್ ಕರ್ಲ್ ಕಾರ್ವರ್ ಅವರ ಬೌಲಿಂಗ್'ನಲ್ಲಿ 6 ಚಂಡುಗಳಲ್ಲಿ 6 ಸಿಕ್ಸ್'ರ್ ಸಿಡಿಸಿ 36 ರನ್ ಬಾರಿಸಿದರು. ವೈಟ್ಲೀ ಸತತ 4 ಚಂಡುಗಳಲ್ಲಿ 4 ಸಿಕ್ಸ್'ರ್ ಸಿಡಿಸಿದರು. ನಂತರ ಒಂದು ವೈಡ್ ಬಾಲ್ ಆಯಿತು. ಪುನಃ ಮತ್ತೆರಡು ಬಾಲ್'ಗಳಲ್ಲಿ 2 ಸಿಕ್ಸ್'ರ್ ಗುಡುಗಿಸಿದರು.
ಈತ ಒಟ್ಟಾರೆ 26 ಚಂಡುಗಳಲ್ಲಿ 8 ಸಿಕ್ಸ್'ರ್ ಹಾಗೂ 2 ಬೌಂಡರಿಗಳೊಂದಿಗೆ 65 ರನ್ ಚಚ್ಚಿದ್ದ. ವೇಟ್ಲಿ ಸ್ಫೋಟಕ ಬ್ಯಾಟಿಂಗ್ ನಡುವೆಯೂ ವರ್ಸೆಸ್ಟರ್ಷೈರ್ ತಂಡ 37 ರನ್'ಗಳಿಂದ ಸೋಲನ್ನು ಅನುಭವಿಸಿತು. ಯಾರ್ಕ್ಷೈರ್ ಒಡ್ಡಿದ 233 ರನ್'ಗಳ ಸವಾಲಿಗೆ ವರ್ಸೆಸ್ಟರ್ಷೈರ್ 20 ಓವರ್'ಗಳಿಗೆ 196 ರನ್ ಗಳಿಸಲಷ್ಟೆ ಶಕ್ತವಾಯಿತು.
ಈ ಮೊದಲು 6 ಮಂದಿಯಿಂದ ದಾಖಲೆ
ಪ್ರಥಮ ದರ್ಜೆ ಪಂದ್ಯದಲ್ಲಿ ಭಾರತದ ರವಿಶಾಸ್ತ್ರಿ ಹಾಗೂ ಆಸ್ಟ್ರೇಲಿಯಾದ ಗ್ಯಾರಿ ಸಬೋರ್ಸ್, ಟಿ20'ಯಲ್ಲಿ ಯುವರಾಜ್ ಸಿಂಗ್, ಸೀಮಿತ ಓವರ್'ಗಳಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್ ಇಂಗ್ಲೆಂಡ್ ಕೌಂಟಿಯಲ್ಲಿ ಲಂಕಾಷೈರ್ನ ಜೋರ್ಡಾನ್ ಕ್ಲಾರ್ಕ್ 6 ಎಸೆತಗಳಲ್ಲಿ 6 ಸಿಕ್ಸ್'ರ್ ಹೊಡೆದಿದ್ದರು.
WATCH: English batsman Ross Whiteley makes history with six sixes in one over. Ross Whiteley the fifth man to hit six sixes in an over after Sobers, Shastri, Gibbs and Yuvraj.