ಮೊದಲ ಪಂದ್ಯದಲ್ಲಿ ಟಾಪ್ ಲಾಥಮ್ ಶತಕ ಬಾರಿಸಿದರೆ, ರಾಸ್ ಟೇಲರ್ 95 ರನ್ ಬಾರಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.

ಮುಂಬೈ(ಅ.23): ಭಾರತೀಯ ಸ್ಪಿನ್ನರ್'ಗಳನ್ನು ಎದುರಿಸಲು ನಾವು ಮೊದಲು ಅಂದಕೊಂಡಂತೆ ಆಡಿದ್ದರಿಂದ ಗೆಲುವು ನಮ್ಮದಾಯಿತು ಎಂದು ರಾಸ್ ಟೇಲರ್ ಹೇಳಿದ್ದಾರೆ.

Add Asianetnews Kannada as a Preferred SourcegooglePreferred

ಭಾರತೀಯ ಪಿಚ್'ನಲ್ಲಿ ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ಶಾಟ್‌'ಗಳ ಮೂಲಕ ಭಾರತದ ಸ್ಪಿನ್ನರ್‌'ಗಳನ್ನು ದಿಕ್ಕುತಪ್ಪಿಸಿದೆವು. ಹಾಗಾಗಿ ನಮ್ಮ ತಂತ್ರ ಫಲಿಸಿತು ಎಂದು ಅನುಭವಿ ಆಟಗಾರ ರಾಸ್ ಟೇಲರ್ ತಿಳಿಸಿದ್ದಾರೆ.

‘ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಾಹಲ್ ಬೌಲಿಂಗ್ ಮಾಡುವ ವೇಳೆ ಸ್ವೀಪ್ ಮತ್ತು ರಿವರ್ಸ್ ಸ್ವೀಪ್ ತಂತ್ರ ಅನುಸರಿಸಲು ಟಾಮ್ ಲೇಥಮ್‌'ಗೆ ಸೂಚಿಸಿದ್ದೆ. ನಮ್ಮ ಯೋಜನೆ ಫಲ ನೀಡಿತು. ಅಂದುಕೊಂಡಂತೆ ಭಾರತೀಯರ ಮೇಲೆ ಒತ್ತಡ ಹೇರಲು ಸಾಧ್ಯವಾಯಿತು’ ಎಂದು ಟೇಲರ್ ಸಂತಸ ವ್ಯಕ್ತಪಡಿಸಿದ್ದಾರೆ.

ಮೊದಲ ಪಂದ್ಯದಲ್ಲಿ ಟಾಪ್ ಲಾಥಮ್ ಶತಕ ಬಾರಿಸಿದರೆ, ರಾಸ್ ಟೇಲರ್ 95 ರನ್ ಬಾರಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದ್ದರು.