ಬೆಲ್ಟ್ ಪಡೆಯಲು ಒಳ್ಳೆಯ ಪ್ರಯತ್ನ ನಡೆಸಿದ್ದೀರಾ, ಆದರೆ ಬೆಲ್ಟ್ ನನ್ನ ಬಳಿಯಿದೆ ಎಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.
ಕೊಲಂಬೊ(ಆ.09): ಇತ್ತೀಚೆಗಷ್ಟೆ ವಿರಾಟ್ ಕೊಹ್ಲಿ, ಉಮೇಶ್ ಯಾದವ್ ಸೇರಿದಂತೆ ಕೆಲ ಕ್ರಿಕೆಟಿಗರು ಶ್ರೀಲಂಕಾದ ಹೋಟೆಲ್'ವೊಂದರಲ್ಲಿ ಡಬ್ಲ್ಯೂಡಬ್ಲ್ಯೂಇ ಪಟು ಗ್ರೇಟ್ ಖಲಿಯನ್ನು ಭೇಟಿ ಮಾಡಿದ್ದ ಸುದ್ದಿ ಸಾಕಷ್ಟು ವೈರಲ್ ಆಗಿತ್ತು.
ಇದೀಗ ಟೀಂ ಇಂಡಿಯಾದ ಕ್ರಿಕೆಟಿಗ ರೋಹಿತ್ ಶರ್ಮಾ ವಿನೂತನವಾಗಿ ಟ್ವೀಟ್ ಮಾಡುವ ಮೂಲಕ ಸಹ ಆಟಗಾರರನ್ನು ಕಾಲೆಳೆದಿದ್ದಾರೆ.
ಬೆಲ್ಟ್ ಪಡೆಯಲು ಒಳ್ಳೆಯ ಪ್ರಯತ್ನ ನಡೆಸಿದ್ದೀರಾ, ಆದರೆ ಬೆಲ್ಟ್ ನನ್ನ ಬಳಿಯಿದೆ ಎಂದು ರೋಹಿತ್ ಶರ್ಮಾ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ 7ರಂದು ವಿರಾಟ್ ಕೊಹ್ಲಿ ಹಾಗೂ ಖಲಿ ಭೇಟಿಯಾಗಿದ್ದರು. ಆ ನಂತರ ಖಲಿ ಭೇಟಿಯ ನೆನಪನ್ನು ಟೀಂ ಇಂಡಿಯಾ ನಾಯಕ ಟ್ವಿಟರ್'ನಲ್ಲಿ ಹಂಚಿಕೊಂಡಿದ್ದರು.
ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿರುವ ರೋಹಿತ್ ಶರ್ಮಾಗೆ ಐಪಿಎಲ್'ನಲ್ಲಿ ತಂಡವನ್ನು ಮೂರನೇ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ ಬೆನ್ನಲ್ಲೇ ಟ್ರಿಪಲ್ ಹೆಚ್ ಖ್ಯಾತಿಯ ಪೌಲ್ ಮೈಕಲ್ ಮೈಕಲ್ ಲಾವೋಸ್ಕಿ ಡಬ್ಲ್ಯೂಡಬ್ಲ್ಯೂಇ ಬೆಲ್ಟನ್ನು ಉಡುಗೊರೆಯಾಗಿ ರೋಹಿತ್ ಶರ್ಮಾಗೆ ನೀಡಿದ್ದರು.
